ದಾವಣಗೆರೆ :ಪ್ರತಿ ವರ್ಷ ಅದ್ಧೂರಿಯಾಗಿ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ನಡೆಯುತ್ತಿದ್ದ ವಾಲ್ಮೀಕಿ ಜಾತ್ರೆಯನ್ನು ಕೋವಿಡ್ ಸಂಕಷ್ಟದ ಹಿನ್ನೆಲೆ ಮುಂದೂಡಲಾಯಿತು.
ಫೆಬ್ರವರಿ ಎಂಟು ಮತ್ತು ಒಂಬತ್ತರಂದು ನಡೆಯಬೇಕಿದ್ದ ವಾಲ್ಮೀಕಿ ಜಾತ್ರೆಯನ್ನು ಪ್ರಸನ್ನಾನಂದಪುರಿ ಶ್ರೀ ಅವರು ಕೊರೊನಾ ಇರುವ ಕಾರಣ ಸರ್ಕಾರದ ನಿಯಮ ಮೀರಿ ಜಾತ್ರೆ ಮಾಡಬಾರದು ಎಂದು ಮನಗಂಡು ಜಾತ್ರೆ ಮುಂದೂಡಿದ್ರು. ಇನ್ನು ಫೆಬ್ರವರಿ 8 ಹಾಗೂ 9ಕ್ಕೆ ಜಾತ್ರೆಯ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ. ಅಂದು ಜಾತ್ರೆ ನಡೆಯುವ ದಿನಾಂಕವನ್ನು ತಿಳಿಸಲಿದ್ದಾರೆ.
ವಾಲ್ಮೀಕಿ ಜಾತ್ರೆ ಮುಂದೂಡಿಕೆ ಕುರಿತಂತೆ ಶ್ರೀ ಪ್ರಸನ್ನಾನಂದಪುರಿ ಶ್ರೀ ಮಾತನಾಡಿರುವುದು.. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ನಡೆಯಲಿದ್ದ ಜಾತ್ರೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ. ಇದಕ್ಕೆ ಇಡೀ ಜಾತ್ರೆ ಕಮಿಟಿ ಸಮ್ಮುಖದಲ್ಲಿ ಇಂದು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಮಾತನಾಡಿದ ಶ್ರೀಗಳು, ಮುಂದೆ ನಡೆಯಬೇಕಿರುವ ಜಾತ್ರೆಯ ದಿನಾಂಕವನ್ನ ಫೆಬ್ರುವರಿ 9ರಂದು ನಡೆಯುವ ಭಕ್ತರ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಠದ ಆವರಣದಲ್ಲಿ ನಡೆದ ಭಕ್ತರ ಸಭೆಯಲ್ಲಿ ವಾಲ್ಮೀಕಿ ಗುರುಪೀಠ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು. ಇದೇ ವೇಳೆ ಭಕ್ತರ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಜಾತ್ರಾ ಸಮಿತಿ ಅಧ್ಯಕ್ಷ ಶಾಸಕ ರಘುಮೂರ್ತಿ ಭಾಗಿಯಾಗಿದ್ದರು.
ಓದಿ:ದಿ. ಮಾದೇಗೌಡರ ಬಗ್ಗೆ ಅವಹೇಳನ : ಜೆಡಿಎಸ್ನಿಂದ ಶಿವರಾಮೇಗೌಡ ಉಚ್ಚಾಟನೆ