ಕರ್ನಾಟಕ

karnataka

ETV Bharat / state

ಕ್ರಿಶ್ಚಿಯನ್, ಇಸ್ಲಾಂ ಬಗ್ಗೆ ಮಾತನಾಡಿದ್ದಿದ್ರೆ ಇಷ್ಟೊತ್ತಿಗೆ ಗೋರಿಯಲ್ಲಿ ಇರ್ತಿದ್ರು: ಮುತಾಲಿಕ್ ಕಿಡಿ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮಗಳ ಬಗ್ಗೆ ಮಾತನಾಡಿದ್ದಿದ್ರೆ ಇಷ್ಟೊತ್ತಿಗೆ ಗೋರಿಯಲ್ಲಿ ಇರುತ್ತಿದ್ದರು. ಹಿಂದೂಗಳಿಗೆ ತಾಳ್ಮೆ ಜಾಸ್ತಿಯಿದೆ, ನಮ್ಮ ಸಮಾಜದ ತಾಳ್ಮೆ ಪರೀಕ್ಷೆ ಮಾಡಬೇಡಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

pramod muthalik
ಪ್ರಮೋದ್ ಮುತಾಲಿಕ್

By

Published : Nov 9, 2022, 9:38 AM IST

ದಾವಣಗೆರೆ: 'ಹಿಂದೂ' ಎನ್ನುವ ಪದ ಪರ್ಷಿಯನ್ ಮೂಲದ್ದು. ಈ ಪದದ ಅರ್ಥ ಅಶ್ಲೀಲವಾಗಿದೆ ಎಂಬ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿಗೆ ಧಮ್ ಇದ್ರೆ ಕುರಾನ್, ಬೈಬಲ್ ಕುರಿತು ಮಾತನಾಡಲಿ. ‌ಕ್ರಿಶ್ಚಿಯನ್ ಅಥವಾ ಇಸ್ಲಾಂ ಬಗ್ಗೆ ಮಾತನಾಡಿದ್ದಿದ್ರೆ ಇಷ್ಟೊತ್ತಿಗೆ ಗೋರಿಯಲ್ಲಿ ಇರ್ತಿದ್ರು. ಹಿಂದೂಗಳಿಗೆ ತಾಳ್ಮೆ ಜಾಸ್ತಿಯಿದೆ, ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡಬೇಡಿ. ಬಹಿರಂಗವಾಗಿ ಇಂತಹ ಹೇಳಿಕೆಯನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಚ್ಚರಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್

ಇದನ್ನೂ ಓದಿ:ಹಿಂದೂ ಶಬ್ಧ ಅಶ್ಲೀಲ ಎಂಬ ಹೇಳಿಕೆ ಧರ್ಮಕ್ಕೆ ಮಾಡಿದ ಅವಮಾನ: ಶಾಸಕ ರೇಣುಕಾಚಾರ್ಯ ಗರಂ

ಸ್ಮಶಾನದಲ್ಲಿ ಪೂಜೆ, ಮದುವೆ ಮಾಡುತ್ತಾರೆ. ಅವರಿಗೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ಹಕ್ಕಿಲ್ಲ. ಹಿಂದೂ ಎಂಬ ಶಬ್ಧ ಬಹಳ ಹಳೆಯದು. ಇದಕ್ಕೆ 2,400 ವರ್ಷಗಳ ಇತಿಹಾಸವಿದೆ. ಕೂಡಲೇ ಸತೀಶ್ ಜಾರಕಿಹೋಳಿ ಹಿಂದೂಗಳ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಸತೀಶ್ ಜಾರಕಿಹೊಳಿ ಕೆಟ್ಟ ರೀತಿ ಹಿಂದೂ ಪದ ಬಳಸಿಲ್ಲ: ದಿನೇಶ್ ಗುಂಡೂರಾವ್ ಸಮರ್ಥನೆ

ಮಾಜಿ ಶಾಸಕ ಬಿ ಟಿ ಲಲಿತಾ ನಾಯಕ್ ವಿರುದ್ಧ ಗರಂ ಆದ ಮುತಾಲಿಕ್, ದೈವಿಕ ನರ್ತಕರಿಗೆ 2 ಸಾವಿರ ರೂ ಮಾಶಾಸನ ನೀಡುವುದು ತಪ್ಪು ಎಂಬ ಹೇಳಿಕೆಯನ್ನು ಖಂಡಿಸಿದರು. ಮಸೀದಿಯಲ್ಲಿ ಆಜಾನ್ ಕೂಗುವ ಮುಸ್ಲಿಮರಿಗೂ ಸರ್ಕಾರ ಮಾಶಾಸನ ನೀಡುತ್ತಿದೆ. ತಾಕತ್ತಿದ್ದರೆ ಅದರ ಬಗ್ಗೆಯೂ ಮಾತನಾಡಿ. ಅದನ್ನು ಹೊರತುಪಡಿಸಿ ಹಿಂದೂಗಳ ಬಗ್ಗೆ ಮಾತನಾಡೋದಲ್ಲ ಎಂದರು.

ಇದನ್ನೂ ಓದಿ:ನನ್ನ ಹೇಳಿಕೆ ತಪ್ಪು ಅಂತಾ ಸಾಬೀತಾದ್ರೆ ರಾಜಕೀಯ ನಿವೃತ್ತಿಗೆ ಸಿದ್ಧ: ಬಿಜೆಪಿಗೆ ಸತೀಶ್ ಜಾರಕಿಹೊಳಿ ಸವಾಲು

ABOUT THE AUTHOR

...view details