ಕರ್ನಾಟಕ

karnataka

ETV Bharat / state

40% ಕಮಿಷನ್​ಗೆ ದಾಖಲೆ ಕೊಡಿ ಎಂದು ಕೇಳ್ತಿದ್ದ ಬಿಜೆಪಿಗರಿಗೆ ವಿರೂಪಾಕ್ಷಪ್ಪನೇ ಸಾಕ್ಷಿ: ಸಿದ್ದರಾಮಯ್ಯ ವಾಗ್ದಾಳಿ - prajadwani yatra program in davangere

ದಾವಣಗೆರೆಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಮತ್ತು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಕೆಎಸ್​ಡಿಎಲ್ ಹಗರಣವನ್ನು ಅಸ್ತ್ರವಾಗಿಸಿಕೊಂಡು ಕಾಂಗ್ರೆಸ್​ ನಾಯಕರು ವಾಗ್ದಾಳಿ ನಡೆಸಿದ್ರು.

Siddaramaiah
ಸಿದ್ದರಾಮಯ್ಯ

By

Published : Mar 11, 2023, 8:21 AM IST

ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ

ದಾವಣಗೆರೆ: ಬಿಜೆಪಿಯವರಿಗೆ ಪ್ರಜಾಪ್ರಭುತ್ವ, ಸಂವಿಧಾನ, ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಇಲ್ಲ. ಅವರು ಸಂವಿಧಾನದ ವಿರುದ್ಧವಾಗಿದ್ದಾರೆ. ಸಾವರ್ಕರ್ ಸಂವಿಧಾನದ ವಿರೋಧಿ. ಆರ್ಟಿಕಲ್ 14 ಹಾಗೂ 16 ರಲ್ಲಿ ಯಾವುದೇ ಧರ್ಮ, ಜಾತಿ, ಭಾಷೆಯ ಎಲ್ಲಾರು ಸಮಾನಾರು ಎಂದು ಹೇಳಲಾಗಿದೆ. ಅದ್ರೆ, ಬಿಜೆಪಿಯವರು ಮತ್ತು ಸಂಘ ಪರಿವಾರದವರು ಸಮಾನತೆ ವಿರುದ್ಧವಾಗಿದ್ದಾರೆ, ಇವರು ಮನುವಾದಿಗಳು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಬಿಜೆಪಿಯು ಮೂರು ಸಿಎಂಗಳನ್ನು ಕೊಟ್ಟ ಪಕ್ಷವಾಗಿದೆ. ಜಗದೀಶ್ ಶೆಟ್ಟರ್, ಸದಾನಂದ ಗೌಡ, ಯಡಿಯೂರಪ್ಪ ಮೂರು ಜನ ಸಿಎಂ ಆಗಿದ್ದರೂ ಕೂಡ ಅವರ ಆಡಳಿತದಲ್ಲಿ ಎಸ್​ಇಪಿ ಹಾಗೂ ಟಿಎಸ್​ಪಿ ಕಾನೂನು ಜಾರಿ ಮಾಡಲಿಲ್ಲ. ಅದ್ರೆ, ನಾನು ಈ ಕಾನೂನುಗಳನ್ನು ಜಾರಿ ಮಾಡಿದೆ. ಇಡೀ ದೇಶದ ಇತಿಹಾಸದಲ್ಲಿ ಎಸ್​ಇಪಿ, ಟಿಎಸ್​ಪಿ ಹಣವನ್ನ ಎಸ್​ಸಿ ಮತ್ತು ಎಸ್​ಟಿಗಳಿಗೆ ಮಾತ್ರ ಖರ್ಚು ಮಾಡಬೇಕೆಂದು ಕಾನೂನು ಮಾಡಿದ್ದು ನಮ್ಮ ಸರ್ಕಾರ. ಎಸ್​ಸಿ , ಎಸ್​ಟಿ ಸಮುದಾಯದ ಬಗ್ಗೆ ಬಿಜೆಪಿಯವರು ಮೊಸಳೆ ಕಣ್ಣೀರು ಹಾಕ್ತಿದ್ದಾರೆ, ಮೋದಿ ಮಾತ್ರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಎಲ್ಲಿದೆ ಸ್ವಾಮಿ ನಿಮ್ಮ ವಿಕಾಸ್?, ತುಳಿತಕ್ಕೆ ಒಳಗಾದವರಿಗೆ ಸೌಲಭ್ಯ ಕೊಡದಿದ್ರೆ ಹೇಗೆ ಅಭಿವೃದ್ಧಿ ಆಗುತ್ತದೆ ಎಂದು ಪ್ರಶ್ನಿಸಿದರು.

ಶಾಸಕ ಮಾಡಾಳ್ ವಿರೂಪಾಕ್ಷಪ್ಪನನ್ನು ಹೇಗೆ ಆಯ್ಕೆ ಮಾಡಿದ್ರಪ್ಪ ನೀವು ಎಂದು ಮತದಾರರನ್ನು ಪ್ರಶ್ನೆ ಮಾಡಿದ ಸಿದ್ದರಾಮಯ್ಯ, 'ಮಾಡಾಳ್ ವಿರೂಪಾಕ್ಷಪ್ಪನ ಮಗ ಪ್ರಶಾಂತ್ ಮಾಡಾಳ್ ಸರ್ಕಾರಿ ಅಧಿಕಾರಿ, ಅವನ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದಾಗ ಆರು ಕೋಟಿ ಹತ್ತು ಲಕ್ಷ ರೂ. ಹಣ ಸಿಕ್ಕಿದೆ. ಅ ಗಿರಾಕಿ ಕೆಎಸ್​ಡಿಎಲ್ ಟೆಂಡರ್ ನೀಡಲು ನಲವತ್ತು ಲಕ್ಷ ಪಡೆಯುವಾಗ ಲೋಕಾಯುಕ್ತದ ಕೈಗೆ ಸಿಕ್ಕಾಕಿಕೊಂಡ. ಅಪ್ಪ ವಿರೂಪಾಕ್ಷಪ್ಪ ಹೇಳಿದಂತೆ ಹಣವನ್ನು ಮಗ ತೆಗೆದುಕೊಂಡಿದ್ದಾನೆ ಅಷ್ಟೇ. 40% ಕಮಿಷನ್​ಗೆ ಸಾಕ್ಷಿ ಕೊಡಿ ಎಂದು ಕೇಳ್ತಿದ್ದ ಬಿಜೆಪಿಗರಿಗೆ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರೇ ಸಾಕ್ಷಿ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಮಾಜಿ ಶಾಸಕ ವಡ್ನಾಳ್ ರಾಜಣ್ಣರಿಗೆ ಟಿಕೆಟ್ ನೀಡುವ ಸಂದೇಶ ರವಾನಿಸಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕೈ ಹಿಡಿರಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಇದನ್ನೂ ಓದಿ:ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ: ಸಿದ್ದರಾಮಯ್ಯ ವಾಗ್ದಾಳಿ

ಚನ್ನಗಿರಿಯಲ್ಲಿ ಜರುಗಿದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, 'ಚನ್ನಗಿರಿ ಶಾಸಕರ ಮನೆಯಲ್ಲಿ ಎಂಟು ಕೋಟಿ ಜಪ್ತಿ ಮಾಡಿದ್ದಾರೆ, ಅವರಿಗೆ ಬೇಲ್ ಬೇರೆ ಕೊಡಿಸಿದ್ದಾರೆ. ಜಾಮೀನು ಪಡೆದು​ ಗ್ರಾಮಕ್ಕೆ ಬಂದಿದ್ದ ಶಾಸಕರಿಗೆ ಅದ್ಧೂರಿ ಮೆರವಣಿಗೆ ಕೂಡ ಮಾಡಲಾಗಿದೆ, ಇದು ಪ್ರಜಾಪ್ರಭುತ್ವದ ದುರಂತ. ಜನ ಇದನ್ನು ಗಮನದಲ್ಲಿಟ್ಟುಕೊಂಡು ಮತ ನೀಡಬೇಕು. ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ. ಮಹಾತ್ಮ ಗಾಂಧಿ ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು. ಇಂದಿರಾ ಗಾಂಧಿ ಕೂಡ ಈ ದೇಶಕ್ಕೆ ಪ್ರಾಣ ಅರ್ಪಣೆ ಮಾಡಿದ್ರು, ರಾಜೀವ್ ಗಾಂಧಿ ಕೂಡ ಸಂಪರ್ಕ ಕ್ರಾಂತಿ ಮಾಡಿದ್ರು, ಮತದಾನದ ಹಕ್ಕನ್ನು 18ನೇ ವಯಸ್ಸಿಗೆ ತಂದರು. ಇದೆಲ್ಲಾ ಇಂದಿನ ಯುವಕರಿಗೆ ತಿಳಿದಿಲ್ಲ ಎಂದರು.

ಇದನ್ನೂ ಓದಿ:ಜನರಿಗೆ ಗ್ಯಾರಂಟಿ ಕಾರ್ಡ್ ಮುಟ್ಟಿಸಲು ವಿಡಿಯೋ ಮೂಲಕ ಸಿದ್ದರಾಮಯ್ಯ, ಡಿಕೆಶಿ ಕರೆ

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಕ್ಕೆ ಪದೇ ಪದೇ ಬರುತ್ತಿದ್ದಾರೆ. ಅವರು ನೂರು ಬಾರಿ ಬರಲಿ, ಜನ ಮಾತ್ರ ಕಾಂಗ್ರೆಸ್​ಗೆ ಆಶೀರ್ವಾದ ಮಾಡಲು ತೀರ್ಮಾನ ಮಾಡಿದ್ದಾರೆ. ಜನ ಆಶೀರ್ವಾದ ಯಾತ್ರೆಯನ್ನ ಬಿಜೆಪಿಯರು ಮಾಡ್ತಿದ್ದಾರೆ, ಮೊದಲು ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲಿ. ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ರಾಮ ರಾಜ್ಯ ಮಾಡುತ್ತೇವೆ ಎಂದು ಮೋದಿ ಹೇಳಿದ್ದರು, ಈಗ ಅವರು ರಾವಣ ರಾಜ್ಯ ಮಾಡಿದ್ದಾರೆ ಎಂದು ಗುಡುಗಿದರು.

ABOUT THE AUTHOR

...view details