ಕರ್ನಾಟಕ

karnataka

ETV Bharat / state

ತೆರಿಗೆ ವಂಚಿಸಲು ಖತರ್​ನಾಕ್​ ಪ್ಲಾನ್​... ದಾವಣಗೆರೆಯಲ್ಲಿ ಸಿಕ್ಕಿಬಿದ್ದ ಬೈಕ್ ಮಾಲೀಕರು - two fake number plate bikes

ತೆರಿಗೆ ಕಟ್ಟಲಾಗದೆ ಕಳ್ಳಮಾರ್ಗ ಕಂಡುಕೊಂಡಿದ್ದ ಬೈಕ್​ ಮಾಲೀಕರಿಗೆ ಪೊಲೀಸರು ಬುದ್ಧಿ ಕಲಿಸಿರುವ ಪ್ರಕರಣ ಬೆಣ್ಣೆ ನಗರಿಯಲ್ಲಿ ನಡೆದಿದೆ.

ರಾಯಲ್​ ಎನ್​ಫೀಲ್ಡ್

By

Published : Mar 13, 2019, 10:50 AM IST

ದಾವಣಗೆರೆ:ತೆರಿಗೆ ಪಾವತಿಸದೇ ನಕಲಿ ನಂಬರ್ ಪ್ಲೇಟ್ ಬಳಸಿ ಸಂಚರಿಸುತ್ತಿದ್ದ ಎರಡು ರಾಯಲ್​ ಎನ್​ಫೀಲ್ಡ್ ಬೈಕ್​​ಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ರಾಯಲ್​ ಎನ್​ಫೀಲ್ಡ್

ದಕ್ಷಿಣ ಸಂಚಾರ ಠಾಣೆಯ ಪಿಎಸ್ಐ ಶೈಲಜಾ ಅವರು ವಾಹನ ತಪಾಸಣೆ ನಡೆಸುವಾಗ ತೆರಿಗೆ ವಂಚಿಸಲು ಬೈಕ್​ಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿರುವುದು ಪತ್ತೆಯಾಗಿದೆ.

ಪವನ್ ಎಂಬುವವರು ರಾಯಲ್ ಎನ್​ಫೀಲ್ಡ್ ಬೈಕ್​ನಲ್ಲಿ ಬರುವಾಗ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತೆರಿಗೆ ಪಾವತಿಸಬೇಕಾಗುತ್ತದೆ ಎಂಬ ಕಾರಣಕ್ಕೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ.

ಇನ್ನು ಉಮೇಶ್ ಎಂಬುವರು ಕೂಡ ಸ್ಕೂಟರ್ ನಂಬರ್ ಪ್ಲೇಟ್​ನ್ನು ಇದೇ ರೀತಿ ಬೇರೆ ಸಂಖ್ಯೆ ಬಳಸಿದ್ದರು. ಅದೇ ರೀತಿ ಹರಿಹರ ಮಹಮ್ಮದ್ ಆಸೀಫ್ ಆಲಿ ಎಂಬುವರು ಸಹ ಇದೇ ರೀತಿಯ ಮಾಡಿರುವುದು ಬೆಳಕಿಗೆ ಬಂದಿದೆ. ವಾಹನ ನೋಂದಣಿ ಮಾಡಿಸದೆ ತೆರಿಗೆ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೈಕ್ ನೋಂದಣಿ ಮಾಡಿಸದೇ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಸಂಚರಿಸುತ್ತಿದ್ದು ಕಂಡು ಬಂದರೆ ಪ್ರಕರಣ ದಾಖಲಿಸುವ ಜೊತೆಗೆ ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


ABOUT THE AUTHOR

...view details