ಕರ್ನಾಟಕ

karnataka

ETV Bharat / state

ಕುರಿ ಕಳ್ಳತನಕ್ಕೆ ಬಂದಿದ್ದ ವ್ಯಕ್ತಿ ರುಂಡ ಕತ್ತರಿಸಿದ ಹಂತಕ - ಮಲೇಬೆನ್ನೂರು ಪೊಲೀಸ್ ಠಾಣೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೊನಗೊಳ್ಳಿ ನಿವಾಸಿಯಾದ ಅರ್ಜುನಪ್ಪ ಎಂಬಾತ ಕುರಿ ಕಳ್ಳತನ ಮಾಡಲು ಬಂದಿದ್ದ ಮಕ್ರಿ ಚಮನ್​ ಸಾಬ್​ ಎಂಬಾತನ ರುಂಡ ಕತ್ತರಿಸಿ ಕೊಲೆ ಮಾಡಿ, ಎಸ್ಕೇಪ್​ ಆಗಿದ್ದ. ಇದೀಗ ಆರೋಪಿಯನ್ನು ಮಲೇಬೆನ್ನೂರು ಪೊಲೀಸ್ ಠಾಣೆಯ ಸಬ್​​ಇನ್​​​ಸ್ಪೆಕ್ಟರ್ ಕಿರಣ್ ಕುಮಾರ್ ಮತ್ತವರ ಸಿಬ್ಬಂದಿ ಬಂಧಿಸಿದ್ದಾರೆ.

ವ್ಯಕ್ತಿ ರುಂಡ ಕತ್ತರಿಸಿದ ಹಂತಕ

By

Published : Sep 23, 2019, 6:23 PM IST

Updated : Sep 23, 2019, 7:46 PM IST

ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಮಲೇಬೆನ್ನೂರು ಸಮೀಪದ ಮೂಗಿನಗೊಂದಿ ಗ್ರಾಮದ ಅಡಿಕೆ ಬಾಳೆ ತೋಟದಲ್ಲಿ ಕುರಿ ಕಳ್ಳತನ ಮಾಡಲು ಬಂದಿದ್ದ ಮಕ್ರಿಚಮನ್ ಸಾಬ್ ಎಂಬಾತನ ರುಂಡ ಕತ್ತರಿಸಿ ಕೊಲೆ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೊನಗೊಳ್ಳಿ ನಿವಾಸಿಯಾದ ಅರ್ಜುನಪ್ಪ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಕೊಲೆಗೆ ಬಳಸಿದ್ದ ಕಬ್ಬಿಣದ ಮಚ್ಚು ವಶಪಡಿಸಿಕೊಳ್ಳಲಾಗಿದೆ.

ವ್ಯಕ್ತಿ ರುಂಡ ಕತ್ತರಿಸಿದ ಹಂತಕ

ಮಲೇಬೆನ್ನೂರು ನಿವಾಸಿಯಾದ ಮಕ್ರಿಚಮನ್ ಸಾಬ್ ಸೆಪ್ಟೆಂಬರ್​​ 22 ರ ಮಧ್ಯರಾತ್ರಿ 1.45 ರ ಸುಮಾರಿಗೆ ಕುರಿ ಕಳ್ಳತನ ಮಾಡಲು ಹೋಗಿದ್ದ. ಈ ವೇಳೆ ಕುರಿಗಾಯಿ ಕೈಗೆ ಮಕ್ರಿ ಚಮನ್ ಸಾಬ್ ಸಿಕ್ಕಿಹಾಕಿಕೊಂಡಿದ್ದಾನೆ. ಆಗ ಅರ್ಜುನಪ್ಪ ಮರದ ಕಟ್ಟಿಗೆಯಿಂದ ಹೊಡೆದು ಚಮನ್​​ನನ್ನು ನೆಲಕ್ಕುರುಳಿಸಿದ್ದಾನೆ. ಬಳಿಕ ಮಚ್ಚಿನಿಂದ ಕತ್ತು ಕಡಿದು ರುಂಡ ಮುಂಡ ಬೇರೆ ಮಾಡಿ ಎಸ್ಕೇಪ್ ಆಗಿದ್ದ.

ಆರೋಪಿ ಅರ್ಜುನಪ್ಪ

ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದರು. ಆರೋಪಿ ಪತ್ತೆಗೆ ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಹರಿಹರ ವೃತ್ತ ನಿರೀಕ್ಷಕ ಐ.ಎಸ್​​​. ಗುರನಾಥ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಮಲೇಬೆನ್ನೂರು ಪೊಲೀಸ್ ಠಾಣೆಯ ಸಬ್​​ಇನ್​​​ಸ್ಪೆಕ್ಟರ್ ಕಿರಣ್ ಕುಮಾರ್ ಮತ್ತವರ ಸಿಬ್ಬಂದಿ ಆರೋಪಿ ಅರ್ಜುನಪ್ಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Last Updated : Sep 23, 2019, 7:46 PM IST

ABOUT THE AUTHOR

...view details