ಕರ್ನಾಟಕ

karnataka

ETV Bharat / state

ಬೀಗ ಹಾಕಿದ ಮನೆಗಳೇ ಇವನ ಟಾರ್ಗೆಟ್​.. ದಾವಣಗೆರೆಯಲ್ಲಿ ಖತರ್ನಾಕ್​ ಕಳ್ಳನ ಸೆರೆ

ಮನೆಗಳಿಗೆ ಬೀಗ ಹಾಕಿದ್ದನ್ನು ಗಮನಿ ಯಾರೂ ಇಲ್ಲದ ವೇಳೆ ಬಂದು ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆ

By

Published : Mar 4, 2019, 5:05 PM IST

ದಾವಣಗೆರೆ:ಬೀಗ ಹಾಕಿದ ಮನೆಗಳನ್ನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಪ್ಲಾಸ್ಟಿಕ್ ವ್ಯಾಪಾರಿಯನ್ನು ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ‌.

ದಾವಣಗೆರೆ

ಮಹಮ್ಮದ್​ ಇಸ್ಮಾಯಿಲ್ (53) ಬಂಧಿತ ಆರೋಪಿ. ಈತ ಚನ್ನಗಿರಿ ತಾಲೂಕಿನ ಟಿಪ್ಪುನಗರದ ಪ್ಲಾಸ್ಟಿಕ್ ವ್ಯಾಪಾರಿ. ಬಂಧಿತನಿಂದ ಏಳು ಲಕ್ಷ ರೂಪಾಯಿ ಮೌಲ್ಯದ 200 ಗ್ರಾಂ ಬಂಗಾರದ ಒಡವೆಗಳು, 55 ಸಾವಿರ ರೂಪಾಯಿ ಮೌಲ್ಯದ ಬೆಳ್ಳಿ ಆಭರಣ, ಮೊದಲಾದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈತ ಹಳೆಯ ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ. ಮನೆ ಮನೆಗೆ ತೆರಳಿ ವಸ್ತುಗಳನ್ನು ಖರೀದಿಸುತ್ತಿದ್ದ ಈತ ಮನೆಗಳಿಗೆ ಬೀಗ ಹಾಕಿದ್ದನ್ನು ಗಮನಿಸಿ ಯಾರೂ ಇಲ್ಲದ ವೇಳೆ ಬಂದು ಮನೆಗಳ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ.

ಇಂದು ನಗರದ ಪಿ. ಬಿ.‌ ರಸ್ತೆಯ ರೇಣುಕಾ ಮಂದಿರದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದನು. ಡಿಸಿಐಬಿ ಇನ್​ಸ್ಪೆಕ್ಟರ್ ಲಕ್ಷ್ಮಣ್ ನಾಯ್ಕ, ಬಡಾವಣೆ ಠಾಣೆ ಪಿಎಸ್ಐ ವೀರಬಸಪ್ಪ ಕುಸಲಾಪುರ ಗಸ್ತು ತಿರುಗುತ್ತಿದ್ದರು. ಈತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಹರಿಹರದಲ್ಲಿ ಎರಡು, ಮಲೆಬೆನ್ನೂರಿನಲ್ಲಿ ಮೂರು ಮನೆಗಳಲ್ಲಿ ಕಳ್ಳತನ ಮಾಡಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ. ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details