ದಾವಣಗೆರೆ :ನಕಲಿ ನಾಣ್ಯ ನೀಡಿ ವಂಚಿಸಿದ್ದ ಖದೀಮರನ್ನು ಜಗಳೂರು ಪೊಲೀಸರು ಬಂಧಿಸಿ ಆರೋಪಿಯಿಂದ ಆರು ಲಕ್ಷ ರೂಪಾಯಿ ನಗದು ಹಾಗು ನಕಲಿ ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಕಾಶ್ (30), ಹನುಮಂತ(52) ಬಂಧಿತ ಆರೋಪಿಗಳು.
ಬುನಾದಿ ತೆಗೆಯುವಾಗ ರಾಣಿ ವಿಕ್ಟೋರಿಯಾ ಮುದ್ರೆಯಿರುವ ಅಪಾರ ಪ್ರಮಾಣದ ಬಂಗಾರದ ನಾಣ್ಯಗಳು ಸಿಕ್ಕಿವೆ ಎಂದು ರಾಯಚೂರು ಮೂಲದ ಕಾಂಟ್ರಾಕ್ಟರ್ ವೀರಣ್ಣ ಎಂಬುವರಿಗೆ ಆರು ಲಕ್ಷ ರೂಪಾಯಿ ವಂಚಿಸಿದ್ದರು. ಈ ಪ್ರಕರಣ ಸಂಬಂಧ ಜಾಡು ಹಿಡಿದು ಹೋದ ಪೊಲೀಸರು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮಾಚೇನಹಳ್ಳಿ ಗ್ರಾಮದ ಸಾತ್ಪಾಡಿಯಲ್ಲಿ ಆರೋಪಿ ಪ್ರಕಾಶ್ ಮತ್ತು ಹನುಮಂತ ಸಿಕ್ಕಿಬಿದ್ದಿದ್ದಾರೆ.