ಕರ್ನಾಟಕ

karnataka

ETV Bharat / state

ಪಿಎಫ್ಐ ಮುಖಂಡ ಇಮಾದುದ್ದೀನ್ ಎನ್ಐಎ ವಶಕ್ಕೆ: ಅವರ ಸಹೋದರ ಹೇಳಿದ್ದೇನು ? - PFI leader Imaduddin in NIA custody

ಯಾವುದೇ ವಾರಂಟ್ ನೀಡದೆ ನಮ್ಮ ಅಣ್ಣನನ್ನು ಕರೆದುಕೊಂಡು ಹೋಗಿದ್ದಾರೆ. ಮನೆಯ ತಪಾಸಣೆ ನಡೆಸಿದ್ದಾರೆ.ನಮ್ಮ ಪೂರ್ವಜರ ಸ್ವಾತಂತ್ರ್ಯ ಹೋರಾಟಗಾರರು. ಇಂತಹ ಕುಟುಂಬದಿಂದ ಬಂದವರು ನಾವು, ಯಾವುದೇ ತಪ್ಪು ಮಾಡಿಲ್ಲ ಎಂದು ಇಮಾದುದ್ದೀನ್​ ಸಹೋದರ ಮಹಮ್ಮದ್ ಸಾದ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ಇಮಾದುದ್ದೀನ್​ ಸಹೋದರ ಮಹಮ್ಮದ್ ಸಾದ್
ಇಮಾದುದ್ದೀನ್​ ಸಹೋದರ ಮಹಮ್ಮದ್ ಸಾದ್

By

Published : Sep 22, 2022, 2:47 PM IST

Updated : Sep 22, 2022, 3:20 PM IST

ದಾವಣಗೆರೆ: ‌ಪಿಎಫ್ಐ ಮುಖಂಡ ಇಮಾದುದ್ದೀನ್​ನನ್ನು ಎನ್ಐಎ ವಶಕ್ಕೆ ಪಡೆದಿದೆ. ಇದರ ಬಗ್ಗೆ ಅವರ ಸಹೋದರ ಮಹಮ್ಮದ್ ಸಾದ್ ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದಾರೆ.

ಏಕಾಏಕಿ ಬೆಳಗಿನ ಜಾವ 4 ಗಂಟೆಗೆ ಎನ್​ಐಎ ಅಧಿಕಾರಿಗಳು ಮನೆಗೆ ಬಂದರು. ಯಾವುದೇ ವಾರಂಟ್​ ನೀಡದೇ ನಮ್ಮ ಅಣ್ಣನನ್ನು ಕರೆದುಕೊಂಡು ಹೋಗಿದ್ದಾರೆ. ಮನೆಯ ತಪಾಸಣೆ ನಡೆಸಿದ್ದಾರೆ. ಮೊಬೈಲ್, ಲ್ಯಾಪ್ ಟಾಪ್, ಬ್ಯಾಂಕ್ ಪಾಸ್ ಬುಕ್ ತೆಗೆದುಕೊಂಡು ಹೋಗಿದ್ದಾರೆ. ಮನೆಯಲ್ಲಿರುವ ಕಬೋರ್ಡ್, ಬಾತ್ ರೂಂಗಳನ್ನು ಚೆಕ್ ಮಾಡಿದ್ದಾರೆ.

ಇಮಾದುದ್ದೀನ್​ ಸಹೋದರ ಮಹಮ್ಮದ್ ಸಾದ್

ನಮ್ಮ ಪೂರ್ವಜರ ಸ್ವಾತಂತ್ರ್ಯ ಹೋರಾಟಗಾರರು. ಇಂತಹ ಕುಟುಂಬದಿಂದ ಬಂದವರು ನಾವು, ಯಾವುದೇ ತಪ್ಪು ಮಾಡಿಲ್ಲ. ನಮ್ಮ ಅಣ್ಣ ಪಿಎಫ್ಐ ಸಂಘಟನೆಯಲ್ಲಿ ಸಾಕಷ್ಟು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಯಾವ ಕಾರಣಕ್ಕೆ ಈ ರೀತಿ ಕರೆದೊಯ್ದಿದ್ದಾರೆ, ಬಹಳ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಶಂಕಿತ ಉಗ್ರರ ಜೊತೆ ನಂಟಿದೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ:ದಾವಣಗೆರೆ, ಹರಿಹರದಲ್ಲೂ ಎನ್​ಐಎ ದಾಳಿ: ಇಬ್ಬರ ವಿಚಾರಣೆ

ಅದು ಮಿಸ್ಟೇಕ್ ಆಗಿ ಇವರ ಹೆಸರು ಬಂದಿದೆ ಎಂದು ಗೊತ್ತಾಗಿದೆ. ಈ ದೇಶದ ಬಗ್ಗೆ ನಮಗೂ ಅಭಿಮಾನ ಇದೆ. ನಮ್ಮ ಅಣ್ಣನಿಗೂ ಅವರು ಮಾಡುತ್ತಿರುವ ಆರೋಪಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.

Last Updated : Sep 22, 2022, 3:20 PM IST

ABOUT THE AUTHOR

...view details