ದಾವಣಗೆರೆ:ಅಪ್ರಾಪ್ತೆಯನ್ನು ಮದುವೆಯಾದ ಯುವಕನನ್ನು ಸಂತೆಬೆನ್ನೂರು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮೆದಿಕೆರೆ ಗ್ರಾಮದಲ್ಲಿ ಭಾನುವಾರ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ಚನ್ನಗಿರಿ ತಾಲೂಕಿನ ಮೆದಿಕರ ಗ್ರಾಮದ ಯಶವಂತ್ (30) ಬಂಧಿತ ಆರೋಪಿ.
ಆರೋಪಿ ಯಶವಂತ್ 16 ವರ್ಷ 7 ತಿಂಗಳು ವಯಸ್ಸಿನ ಬಾಲಕಿಯನ್ನು ಜೂನ್ 24ರಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕಲ್ಲತ್ಗೆರೆ ವೀರಭದ್ರಸ್ವಾಮಿ ದೇವಸ್ಥಾನದಲ್ಲಿ ವಿವಾಹವಾಗಿದ್ದ. ವಿಷಯ ತಿಳಿದು, ಮೆದಿಕೆರೆ ಗ್ರಾಮಕ್ಕೆ ಜೂ.25ರಂದು ಪೊಲೀಸರು, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು.