ದಾವಣಗೆರೆ :ಜಿಲ್ಲೆಯ ಚನ್ನಗಿರಿ ಅರೆ ಮಲೆನಾಡು ಭಾಗ ಎಂದೇ ಖ್ಯಾತಿ ಗಳಿಸಿದೆ. ಆದರೆ, ತಾಲೂಕಿನ ಗರಗ ಗ್ರಾಮದಲ್ಲಿರುವ ಕೆರೆಯಲ್ಲಿ ಮಾತ್ರ ಹನಿ ನೀರಿಲ್ಲದೆ ಇಡೀ ಕೆರೆ ಭಣಗುಡುತ್ತಿದೆ. ಹೀಗಾಗಿ, ಇಡೀ ಗ್ರಾಮಸ್ಥರು ನೀರಿಲ್ಲದೆ ಹೈರಾಣಾಗಿದ್ದಾರೆ.
ಶಾಂತಿಸಾಗರ (ಸೂಳೆಕೆರೆ)ದಿಂದ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹಲವು ಭಾಗಗಳಿಗೆ ನೀರು ಕೊಂಡೊಯ್ಯಲಾಗಿದೆ. ಶಾಂತಿ ಸಾಗರದ ಪಕ್ಕವೇ ಇರುವ ಈ ಗರಗ ಗ್ರಾಮಕ್ಕೆ ಮಾತ್ರ ಜಲ ಭಾಗ್ಯ ಇಲ್ಲದಂತಾಗಿದೆ. ಇದರಿಂದ ರೋಸಿ ಹೋಗಿರುವ ಗ್ರಾಮದ ಜನರು ಇದೀಗ ಮುದ್ದೇನಹಳ್ಳಿ ಹಳ್ಳದಿಂದ ಕೆರೆ ತುಂಬಿಸಲು ಯೋಜನೆ ರೂಪಿಸಿದ್ದಾರೆ.
ಈ ಯೋಜನೆಗೆ ಸುಮಾರು 30 ಲಕ್ಷ ರೂಪಾಯಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ, ದಾನಿಗಳ ನೆರವಿನಿಂದ ಕೆರೆ ತುಂಬಿಸಲು ಸ್ಥಳೀಯರು ಮುಂದಾಗಿದ್ದಾರೆ. ಹಳ್ಳಕ್ಕೆ ಸುಮಾರು 2 ಕಿ.ಮೀ ದೂರವಾಗಲಿದೆ. ಹೀಗಾಗಿ, ಪೈಪ್ ಲೈನ್ ಅಳವಡಿಕೆಗೆ ಪ್ಲಾನ್ ಮಾಡಿದ್ದಾರೆ.