ಕರ್ನಾಟಕ

karnataka

ETV Bharat / state

ದಾವಣಗೆರೆ: ಮತ್ತಷ್ಟು 'ನಮ್ಮ ಕ್ಲಿನಿಕ್' ತೆರೆಯಲು ಜನರ ಒತ್ತಾಯ - ​ ETV Bharat Karnataka

ದಾವಣಗೆರೆ ನಗರ ಪ್ರದೇಶವನ್ನು ಹೊರತುಪಡಿಸಿ ಉಳಿದ ತಾಲೂಕು, ಹಳ್ಳಿಗಳಲ್ಲಿಯೂ ನಮ್ಮ ಕ್ಲಿನಿಕ್​ಗಳನ್ನು ತೆರೆಯುವಂತೆ ಸರ್ಕಾರವನ್ನು ಜನರು ಒತ್ತಾಯಿಸಿದರು.

ನಮ್ಮ ಕ್ಲಿನಿಕ್
ನಮ್ಮ ಕ್ಲಿನಿಕ್

By ETV Bharat Karnataka Team

Published : Oct 6, 2023, 7:50 PM IST

Updated : Oct 7, 2023, 1:11 PM IST

ದಾವಣಗೆರೆ ನಮ್ಮ ಕ್ಲಿನಿಕ್

ದಾವಣಗೆರೆ :ರಾಜ್ಯಾದ್ಯಂತ ನಮ್ಮ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ದಾವಣಗೆರೆಯಲ್ಲಿ ಒಂದು ಕ್ಲಿನಿಕ್ ತೆರೆಯಲಾಗಿದ್ದು, ಇನ್ನಷ್ಟು ಕ್ಲಿನಿಕ್​ಗಳನ್ನು ತೆರೆಯುವಂತೆ ಜನರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಯಾಗಿರುವ 'ನಮ್ಮ ಕ್ಲಿನಿಕ್'​ ಯೋಜನೆ ಶುರುವಾಗಿ ವರ್ಷಗಳು ಉರುಳಿವೆ. ಹೀಗಿದ್ದರೂ ದಾವಣಗೆರೆ ನಗರದಲ್ಲಿ ಒಂದು ಕ್ಲಿನಿಕ್ ಮಾತ್ರ ಕಾರ್ಯರೂಪಕ್ಕೆ ಬಂದಿದೆ. ಜಿಲ್ಲಾ ಕೇಂದ್ರದ ಕೂಗಳತೆಯಲ್ಲಿ ಮಾತ್ರ ನಮ್ಮ ಕ್ಲಿನಿಕ್ ಇದ್ದು, ಉಳಿದ ತಾಲೂಕು, ಹಳ್ಳಿಗಳಲ್ಲಿ ಹೊಸ ಕ್ಲಿನಿಕ್​ ತೆರೆಯಲು ಇಂದಿನ ಸರ್ಕಾರ ಎಡವಿದೆ ಜನರು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಕೊಳಗೇರಿ ನಿವಾಸಿಗಳು, ಕೂಲಿ ಕಾರ್ಮಿಕರು, ದುರ್ಬಲ ವರ್ಗದವರು ಹಾಗು ನಗರ ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ಆರೋಗ್ಯ ಸೇವೆ ದೊರೆಯಲಿ ಎಂಬ ದೃಷ್ಟಿಯಿಂದ ಬಿಜೆಪಿ ಸರ್ಕಾರ ರಾಜ್ಯಾದ್ಯಂತ 415 ನಮ್ಮ ಕ್ಲಿನಿಕ್‌ಗಳನ್ನು ತೆರೆದಿತ್ತು. ರಾಜ್ಯದ ಬೇರೆ ಜಿಲ್ಲೆಗಳಲ್ಲಿ ಹತ್ತಕ್ಕೂ ಹೆಚ್ಚು ಇಂಥ ಕ್ಲಿನಿಕ್‌ಗಳನ್ನು ತೆರೆಯಾಗಿದೆ.

ದಾವಣಗೆರೆಯಲ್ಲಿ 2022ರಲ್ಲಿ ಒಂದು ನಮ್ಮ ಕ್ಲಿನಿಕ್ ತೆರೆಯಲಾಗಿದ್ದು, ಇದು ದಾವಣಗೆರೆ ನಗರ ಹಾಗು ಗ್ರಾಮೀಣ ಪ್ರದೇಶದ ಮಧ್ಯೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ಒಬ್ಬರು ಎಂಬಿಬಿಎಸ್ ವೈದ್ಯರು, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್, ಗ್ರೂಪ್‌ ಡಿ ನೌಕರ ಸೇವೆ ಸಲ್ಲಿಸುತ್ತಿದ್ದಾರೆ. ಈ ಕ್ಲಿನಿಕ್ ಮೊದಲು ಬೆಳಗ್ಗೆ 10 ರಿಂದ ಸಂಜೆ 4 ಗಂಟೆ ತನಕ ಸೇವೆ ಕಲ್ಪಿಸುತ್ತಿತ್ತು. ಕೇಂದ್ರ ಪುರಸ್ಕೃತವಾಗಿದ್ದರಿಂದ ಸಮಯವನ್ನು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಹಾಗು ಸಂಜೆ 4 ರಿಂದ 8 ಸೌಲಭ್ಯ ನೀಡಲಾಗುತ್ತಿದೆ.

ಕೂಲಿ ಕಾರ್ಮಿಕರು, ಗರ್ಭಿಣಿಯರು ಹಾಗು ಮಕ್ಕಳಿಗೆ ಅನುಕೂಲವಾಗಲಿ ಎಂದು ಈ ಸಮಯ ಬದಲಾವಣೆ ಮಾಡಲಾಗಿದೆ. 2023-24 ಸಾಲಿನಲ್ಲಿ ಹೊನ್ನಾಳಿ, ಜಗಳೂರು, ಚನ್ನಗಿರಿಯಲ್ಲಿ ನಮ್ಮ ಕ್ಲಿನಿಕ್ ತೆರೆಯಲು ಸಿದ್ದತೆ ನಡೆದಿದೆ.‌ ಗ್ರಾಮೀಣ ಭಾಗದಲ್ಲಿರುವ ಜನರು ಕೂಲಿಗೆ ತೆರಳುವವರು ಬೆಳಗ್ಗೆ ಇಲ್ಲವೇ ಸಂಜೆಯ ಹೊತ್ತಿಗೆ ಕ್ಲಿನಿಕ್‌ನಿಂದ ಅನುಕೂಲ ಪಡೆಯಲಿ ಎಂಬ ಉದ್ದೇಶದಿಂದ ಸಮಯ ಬದಲಾವಣೆ ಮಾಡಲಾಗಿದೆ. ದಾವಣಗೆರೆಯ ಏಕೈಕ ನಮ್ಮ ಕ್ಲಿನಿಕ್ ವ್ಯಾಪ್ತಿಯಲ್ಲಿ 11,103 ಜನಸಂಖ್ಯೆ ಇದೆ. ರಾಜ್ಯದಲ್ಲಿ ಒಟ್ಟು 415 ನಮ್ಮ ಕ್ಲಿನಿಕ್‌ಗಳಿದ್ದು, ಒಟ್ಟು 52 ಕ್ಲಿನಿಕ್‌ಗಳಲ್ಲಿ ಸಮಯ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಆರ್​ಸಿಹೆಚ್ ರೇಣುಕಾರಾಧ್ಯ ಎ.ಎಂ. ತಿಳಿಸಿದರು.

ಸಮಯ ಬದಲಾವಣೆಗೆ ಆಕ್ರೋಶ:ನಮ್ಮಕ್ಲಿನಿಕ್​ನ ಸೇವೆ ಸೌಲಭ್ಯದ ವೇಳೆಯನ್ನು ಬದಲಾವಣೆ ಮಾಡಿರುವುದರಿಂದ ರೋಗಿಗಳಿಗೆ ಸಮಸ್ಯೆ ಆಗುತ್ತಿದೆ. ಅದ್ದರಿಂದ ಮೊದಲಿಗೆ ಮೊದಲು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ತನಕ ಸೇವೆ ಇತ್ತು. ಅದೇ ಸಮಯಕ್ಕೆ ಕ್ಲಿನಿಕ್ ತೆರೆಯಬೇಕು. ಇದೀಗ ಹೊಸ ಸಮಯ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಹಾಗು ಸಂಜೆ 4 ರಿಂದ 8 ವರೆಗೆ ಸೌಲಭ್ಯ ನೀಡಲಾಗುತ್ತಿದೆ. ಈ ಸಮಯವನ್ನು ಬದಲಾವಣೆ ಮಾಡಬೇಕು. ಸಮಯದ ಬದಲಾವಣೆಯಿಂದ ರೋಗಿಗಳು ವಾಪಸ್ ಹೋಗುವುದು ಸಾಮಾನ್ಯವಾಗಿದೆ‌ ಎಂದು ಸ್ಥಳೀಯ ಮಹೇಶ್ವರಪ್ಪ ತಿಳಿಸಿದರು.

ಇದನ್ನೂ ಓದಿ:ಇನ್ನಷ್ಟು ಜನಸ್ನೇಹಿ ಆಗಲಿದೆ ನಮ್ಮ ಕ್ಲಿನಿಕ್​.. ರಾತ್ರಿ 8 ಗಂಟೆವರೆಗೂ ಓಪನ್​ ಇರುವಂತೆ ಕ್ರಮ

Last Updated : Oct 7, 2023, 1:11 PM IST

ABOUT THE AUTHOR

...view details