ಕರ್ನಾಟಕ

karnataka

ETV Bharat / state

ಮಳೆಗಾಗಿ ದುಗ್ಗಮ್ಮನ ಸನ್ನಿಧಿಯಲ್ಲಿ ಸಂತೆ! ಬೆಣ್ಣೆ ನಗರಿಯಲ್ಲಿ ವಿಶಿಷ್ಟ ಆಚರಣೆ

ಮುಂಗಾರು ಮಳೆ ಇನ್ನೂ ಆರಂಭವಾಗದ ಹಿನ್ನೆಲೆಯಲ್ಲಿ ದಾವಣಗೆರೆಯ ಮಂದಿ ಮಳೆ ಬರಲೆಂದು ಪ್ರಾರ್ಥಿಸಿ, ಗ್ರಾಮ ದೇವತೆಯ ಗುಡಿಯೆದುರು ಪ್ರತೀ ಭಾನುವಾರದಂದು ತರಕಾರಿ ಸಂತೆ ನಡೆಸುತ್ತಿದ್ದಾರೆ.

ಮಳೆಗಾಗಿ ದೇವಸ್ಥಾನದ ಆವರಣದಲ್ಲಿ ಸಂತೆ.

By

Published : Jun 9, 2019, 8:18 PM IST

ದಾವಣಗೆರೆ: ಜಿಲ್ಲೆಯ ಜನತೆ ಇಲ್ಲಿನ ನಗರ ದೇವತೆ ದುಗ್ಗಮ್ಮ ದೇವಾಲಯದ ಆವರಣದಲ್ಲಿ ಮಳೆ ಬರಲೆಂದು ಪ್ರಾರ್ಥಿಸಿ ತರಕಾರಿ ಸಂತೆ ನಡೆಸುವ ಮೂಲಕ ವರುಣ ದೇವನ ಮೊರೆ ಹೋಗಿದ್ದಾರೆ.

ಮಳೆಗಾಗಿ ದೇವಸ್ಥಾನದ ಆವರಣದಲ್ಲಿ ಸಂತೆ
ದಾವಣಗೆರೆ ನಗರ ಮತ್ತು ಸುತ್ತಮುತ್ತ ಭಾಗದಲ್ಲಿ ಮಳೆಯ ದರ್ಶನವೇ ಆಗಿಲ್ಲ. ಕಳೆದ ಬೇಸಿಗೆಯಲ್ಲಂತೂ ಜನರು ಕುಡಿಯುವ ನೀರಿಗೆ ಇನ್ನಿಲ್ಲದ ತೊಂದರೆ ಅನುಭವಿಸಿದ್ದರು. ಕೊಳವೆ ಬಾವಿಯಲ್ಲೂ ನೀರಿಲ್ಲದಂತಾಗಿ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತ್ತು. ಈ ಕಾರಣಕ್ಕಾಗಿಯೇ ದೇವಸ್ಥಾನ‌ದ ಆಡಳಿತ ಸಮಿತಿ ಹಾಗೂ ಮಹಾನಗರಪಾಲಿಕೆ, ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಎದುರು ಪ್ರತಿ ಭಾನುವಾರ ಸೇರಿದಂತೆ ಐದು ವಾರದ ಕಾಲ ಸಂತೆ ನಡೆಸುವ ತೀರ್ಮಾನಕ್ಕೆ ಬಂದಿದೆ.

ABOUT THE AUTHOR

...view details