ದಾವಣಗೆರೆ: ಟ್ರ್ಯಾಕ್ಟರ್ ಮಗುಚಿ ಬಿದ್ದು, ಅದರ ಅಡಿ ಸಿಲುಕಿದ್ದ ಚಾಲಕನನ್ನ ಜನರು ಸಾಹಸ ಮಾಡಿ ರಕ್ಷಿಸಿರುವ ಘಟನೆ ಹರಿಹರ ತಾಲೂಕಿನ ಇಂಗಳಗುಂದಿಯಲ್ಲಿ ನಡೆದಿದೆ.
ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಬಡ ಜೀವವೊಂದು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿದೆ. ಇಂಗಳಗುಂದಿಯಿಂದ ಹುಲಿಗಿನಹೊಳೆಯ ಬಸವೇಶ್ವರ ಜಾತ್ರೆಗೆ ವೇಗವಾಗಿ ಹೋಗುತ್ತಿರುವಾಗ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಭತ್ತದ ಗದ್ದೆಗೆ ಉರುಳಿದೆ. ಟ್ರ್ಯಾಕ್ಟರ್ ಮುಗುಚಿ ಬಿದ್ದ ಪರಿಣಾಮ ಚಾಲಕ ವಾಹನದ ಅಡಿ ಸಿಲುಕಿಕೊಂಡಿದ್ದನು. ಚಾಲಕ ಇಂಜಿನ್ ಅಡಿ ಸಿಲುಕಿ ಅರ್ಧಗಂಟೆಗೂ ಅಧಿಕ ಕಾಲ ಸಾವು - ಬದುಕಿನ ಮಧ್ಯ ಹೋರಾಟ ನಡೆಸಿದ್ದ.