ದಾವಣಗೆರೆ: ಸರ್ಕಾರಿ ಜಾಗವನ್ನು ಬೇರೆಯವರ ಹೆಸರಿಗೆ ಮಾಡಿಕೊಟ್ಟು ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಪಿಡಿಒ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ದಾವಣಗೆರೆ ತಾಲೂಕಿನ ಮಳಲ್ಕೇರೆ ಗ್ರಾಮ ಪಂಚಾಯಿತಿ ಪಿಡಿಒ ನಿಂಗಾಚಾರಿ, ಎಸಿಬಿ ಬಲೆಗೆ ಬಿದ್ದ ಅಧಿಕಾರಿ.

ಇವರು ಸರ್ಕಾರಿ ಜಾಗವನ್ನು ಬೇರೆಯವರ ಖಾತೆ ಮಾಡಿಸಿಕೊಟ್ಟಿದ್ದಲ್ಲದೇ, ವಕೀಲ ರವಿ ಕುಮಾರ್ ಎನ್ನುವವರಿಗೆ ಫೀಸ್ ನೀಡಬೇಕು ಎಂದು ಹೇಳಿ 5000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ಇದೆ.
ಎಸಿಬಿ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ವಿಚಾರಣೆ ಮುಂದುವರಿದಿದೆ.