ದಾವಣಗೆರೆ:ಮಕ್ಕಳು ಇಲ್ಲದವರು ಮಕ್ಕಳಿಗಾಗಿ ಹಂಬಲಿಸುವುದನ್ನು ನೋಡಿದ್ದೇವೆ. ಅದ್ರೇ ಬೆಣ್ಣೆನಗರಿಯ ದಾವಣಗೆರೆಯಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ.
ತಮ್ಮ ಮಗ ವಿಶೇಷಚೇತನ ಎಂಬ ಒಂದೇ ಕಾರಣಕ್ಕೆ ಅವನ ಹೆತ್ತವರು ಮಗನನ್ನು ಬೀದಿಯಲ್ಲಿ ಬಿಟ್ಟು ಹೋಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ವಿಶೇಷಚೇತನ ಮಗನನ್ನು ನಡು ಬೀದಿಯಲ್ಲೇ ಬಿಟ್ಟು ಹೋದ ಪೋಷಕರು ದಾವಣಗೆರೆಯ ಮಹಾನಗರ ಪಾಲಿಕೆಯ ಮುಂಭಾಗ ವಿಶೇಷಚೇತನ ಮಗನನ್ನು ಪಾಲಕರು ಬಿಟ್ಟು ಹೋಗಿದ್ದರಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕಿರಣ್ ನಾಯ್ಕ್ (20) ಬೀದಿಪಾಲದ ವಿಶೇಷಚೇತನ ಯುವಕ. ಹುಟ್ಟುತ್ತಲೇ ವಿಶೇಷಚೇತನಾಗಿದ್ದ ಕಿರಣ್ ನಾಯ್ಕ್ನನ್ನು ಸಾಕಲಾಗದೆ ಪೋಷಕರು ನಡು ಬೀದಿಯಲ್ಲಿ ಬಿಟ್ಟು ಹೋಗಿದ್ದಾರೆ. ತಂದೆ-ತಾಯಿ ಇದ್ರೂ ಕಿರಣ್ ಇದೀಗ ಅನಾಥ ಆಗಿದ್ದಾನೆ.
ಬೀದಿಪಾಲದ ಕಿರಣ್ ನಾಯ್ಕ್ಗೆ ದಾವಣಗೆರೆಯ ಪ್ರೇರಣ ಮಕ್ಕಳ ಆರೈಕೆ ಕೇಂದ್ರ ಇದೀಗ ಆಸರೆಯಾಗಿದೆ. ಮಹಾನಗರ ಪಾಲಿಕೆ ಬಳಿ ಬೀದಿಪಾಲಾಗಿದ್ದಾ ಯುವಕನ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪ್ರೇರಣ ಮಕ್ಕಳ ಆರೈಕೆ ಕೇಂದ್ರ ಸಿಬ್ಬಂದಿ ಕಿರಣ್ನನ್ನು ಕರೆದೊಯ್ದು ಆತನ ಜೀವನಕ್ಕೆ ಆಸರೆಯಾದರು.
ಇನ್ನು ಕಿರಣ್ ಪೋಷಕರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.