ಕರ್ನಾಟಕ

karnataka

ETV Bharat / state

ನಡು ರಸ್ತೆಯಲ್ಲೇ ಆಂಬ್ಯುಲೆನ್ಸ್ ನಿಲ್ಲಿಸಿ ಗರ್ಭಿಣಿಗೆ ಹೆರಿಗೆ ಮಾಡಿಸಿದ ಅರೆ ವೈದ್ಯಕೀಯ ಸಿಬ್ಬಂದಿ: ಪ್ರಶಂಸೆ - Ambulance

ನಡು ರಸ್ತೆಯಲ್ಲೇ ಆಂಬ್ಯುಲೆನ್ಸ್ ನಿಲ್ಲಿಸಿ ಅರೆವೈದ್ಯಕೀಯ ಸಿಬ್ಬಂದಿ ಎನ್.ಚೌಡಪ್ಪ ಹೆರಿಗೆ ಮಾಡಿಸಿದ್ದಾರೆ.

ಆಂಬ್ಯುಲೆನ್ಸ್ ನಲ್ಲೇ ಸುಸ್ರೂತವಾಗಿ ಹೆರಿಗೆ
ಆಂಬ್ಯುಲೆನ್ಸ್ ನಲ್ಲೇ ಸುಸ್ರೂತವಾಗಿ ಹೆರಿಗೆ

By

Published : May 29, 2023, 10:27 PM IST

ದಾವಣಗೆರೆ : ಗರ್ಭಿಣಿಯರಿಗೆ ಹೆರಿಗೆ ನೋವು ಹೆಚ್ಚಾದಾಗ ಜನ ಸಾಮಾನ್ಯರು ಏನು ಮಾಡಬೇಕು ಎಂದು ಗೊಂದಲಕ್ಕೆ ಬೀಳುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಆಶಾಕಾರ್ಯಕರ್ತೆ ಹಾಗೂ ಅರೇ ವೈದ್ಯಕೀಯ ಸಿಬ್ಬಂದಿ ಇಬ್ಬರೂ ಸೇರಿ ತುಂಬು ಗರ್ಭಿಣಿಗೆ ಹೆರಿಗೆ ನೋವು ಹೆಚ್ಚಾದ ಬೆನ್ನಲ್ಲೇ ಆ ಮಹಿಳೆಗೆ ಆಂಬ್ಯುಲೆನ್ಸ್ ನಲ್ಲೇ ಸುಸ್ರೂತವಾಗಿ ಹೆರಿಗೆ ಮಾಡಿಸಿದ್ದು, ತಾಯಿ ಹಾಗೂ ಮಗುವಿನ ಪ್ರಾಣ ಉಳಿಸುವಲ್ಲಿ ಸಫಲರಾಗಿದ್ದಾರೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಗೌರಿಪುರ ಹೊಸೂರು ಗ್ರಾಮದ ನಿವಾಸಿಯಾದ ಚೌಡಮ್ಮ ಅವರಿಗೆ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಚೌಡಮ್ಮ ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್ ಕರೆ ಮಾಡಿದ್ದಾರೆ. ಬಳಿಕ ಬಂದ ಆಂಬ್ಯುಲೆನ್ಸ್ ನಲ್ಲಿ ಜಗಳೂರು ಆಸ್ಪತ್ರೆಗೆ ಗರ್ಭಿಣಿ ಕರೆದುಕೊಂಡು ಹೋಗುವ ವೇಳೆ ಮಾರ್ಗ ಮಧ್ಯದಲ್ಲಿ ಹೆರಿಗೆ ನೋವು ಹೆಚ್ಚಾಗಿದೆ.

ಇದನ್ನೂ ಓದಿ :ಕಾಮಗಾರಿಗಳ ಫೋಟೋ, ವಿಡಿಯೋ, ದಾಖಲೆಗಳ ಸಮೇತ ಸರ್ಕಾರಕ್ಕೆ ವರದಿ ಸಲ್ಲಿಸಿ: ಪಾಲಿಕೆ ಅಧಿಕಾರಿಗಳಿಗೆ ಡಿಸಿಎಂ ಡಿಕೆಶಿ ಸೂಚನೆ

ಈ ಸಂದರ್ಭದಲ್ಲಿ ಎಚ್ಚೆತ್ತ ಅರೆವೈದ್ಯಕೀಯ ಸಿಬ್ಬಂದಿ ಎನ್.ಚೌಡಪ್ಪ ಎಂಬುವರು ರಸ್ತೆಯಲ್ಲೇ ಆಂಬ್ಯುಲೆನ್ಸ್ ನಿಲ್ಲಿಸಿ ಗರ್ಭಿಣಿ ಚೌಡಮ್ಮಳಿಗೆ ಹೆರಿಗೆ ಮಾಡಿಸಿದ್ದಾರೆ. ಆಶಾ ಕಾರ್ಯಕರ್ತೆ ಶ್ವೇತಾ ಹಾಗೂ ಆಂಬ್ಯುಲೆನ್ಸ್ ಚಾಲಕ ಹನುಮಂತ ಇಬ್ಬರು ಸಹಕಾರ ನೀಡಿದ್ದಕ್ಕೆ ಹೆರಿಗೆ ಯಶಸ್ವಿಯಾಗಿದೆ.‌ ಚೌಡಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದು, ಬಳಿಕ ತಾಯಿ ಮತ್ತು ಮಗುವನ್ನು ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ. ಇನ್ನು ಇವರು ಮುಂಜಾಗ್ರತಾ ಕ್ರಮ ವಹಿಸಿ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದರಿಂದ ಜಿಲ್ಲಾ ಆರೋಗ್ಯಧಿಕಾರಿ ಪ್ರಶಂಸೆ ವ್ಯಕ್ತಪಡಿಸಿದರು.

ರಸ್ತೆಯಲ್ಲಿ ಕೆಟ್ಟು ನಿಂತ ಆಂಬ್ಯುಲೆನ್ಸ್​: ಗರ್ಭಿಣಿ ಪರದಾಟ :ಕಳೆದ ಫೆಬ್ರವರಿ ತಿಂಗಳ ವೇಳೆ ಚಿಕ್ಕಮಗಳೂರಿನಲ್ಲಿ ಇಂತಹುದೇ ಘಟನೆ ನಡೆದಿತ್ತು.ಕಳಸ ತಾಲೂಕಿನ ಹಳುವಳ್ಳಿ ಗ್ರಾಮದ ಶರಣ್ಯ ಎಂಬ ತುಂಬು ಗರ್ಭಿಣಿಯನ್ನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಆಂಬ್ಯುಲೆನ್ಸ್ ಕೆಟ್ಟು ನಿಂತಿತ್ತು. ಬಳಿಕ ದುರಸ್ತಿ ಮಾಡಿಕೊಂಡು ಹೊರಟರೆ ಸ್ವಲ್ಪ ದೂರದಲ್ಲಿ ತಾಂತ್ರಿಕ ದೋಷದಿಂದ ಆಂಬ್ಯುಲೆನ್ಸ್ ಮತ್ತೆ ನಿಂತಿತ್ತು. ಈ ಮಧ್ಯೆ ರಸ್ತೆಯಲ್ಲಿನ ಗುಂಡಿಗೆ ಇಳಿದ ಆಂಬ್ಯುಲೆನ್ಸ್​, ಪಂಚರ್ ಕೂಡ ಆಗಿತ್ತು.

ಇದನ್ನೂ ಓದಿ :ಆತಂಕದಲ್ಲಿ ಮಕ್ಕಳ ಶಿಕ್ಷಣ; ಸರ್ಕಾರಿ ಶಾಲೆಗಳ ಗೋಳು ಕೇಳೋರು ಯಾರು..?

ಹೀಗೆ ಎರಡ್ಮೂರು ಬಾರಿ ಕೆಟ್ಟು ನಿಂತ ಆಂಬ್ಯುಲೆನ್ಸ್ ದುರಸ್ತಿಯಾಗುವಷ್ಟರಲ್ಲಿ ಸುಮಾರು 2 ಗಂಟೆಗಳೇ ಕಳೆದಿತ್ತು. ಇದರಿಂದಾಗಿ ತೀವ್ರ ಅಸ್ವಸ್ಥರಾದ ಶರಣ್ಯಳನ್ನು ಕಂಡು ಸ್ಥಳೀಯರು ಬಾಳೆಹೊನ್ನೂರಿಗೆ ಫೋನ್ ಮಾಡಿ ಬೇರೊಂದು ಆಂಬ್ಯುಲೆನ್ಸ್ ಕರೆಸಿದ್ದರು. ನಂತರ ಗರ್ಭಿಣಿಯನ್ನು ಕೊಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಕೊಪ್ಪ ಆಸ್ಪತ್ರೆಗೆ ದಾಖಲಾದ ಶರಣ್ಯ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಇದನ್ನೂ ಓದಿ :ಬೆಂಗಳೂರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ; ತನಿಖೆಗೆ ಆಗ್ರಹಿಸಿದ ದಲಿತ ಸಂಘರ್ಷ ಸಮಿತಿ

ABOUT THE AUTHOR

...view details