ಕರ್ನಾಟಕ

karnataka

ETV Bharat / state

ಲಾಭಕ್ಕಿಂತ ಉತ್ಪಾದನಾ ವೆಚ್ಚವೇ ಹೆಚ್ಚು.. ದಾವಣಗೆರೆ ಭತ್ತ ಬೆಳೆಯೋ ರೈತರ ಬವಣೆ ಯಾರ್‌ ಕೇಳ್ಬೇಕು? - ಆತಂಕ

ಅತಿವೃಷ್ಠಿ, ಅನಾವೃಷ್ಠಿ ಹಾಗೂ ಬೆಳೆಗೆ ರೋಗ ಬಿದ್ದರೆ ರೈತರ ಪಾಡು ಅಧೋಗತಿ. ಗೊಬ್ಬರಕ್ಕೆ ಯಾವಾಗಲೂ ಫಿಕ್ಸ್ ದರ ಇರುತ್ತದೆ. ಆದರೆ, ಭತ್ತಕ್ಕೆ ಮಾತ್ರ ನಿಗದಿತ ದರ ಇಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪಾತಾಳಕ್ಕಿಳಿದ ಭತ್ತದ ಬೆಳೆ... ಆತಂಕದಲ್ಲಿ ರೈತರು

By

Published : May 31, 2019, 8:59 AM IST

ದಾವಣಗೆರೆ:ಭತ್ತದ ಬೆಲೆ ಪಾತಾಳಕ್ಕೆ ಇಳಿದಿದ್ದು ಬೆಳೆಗಾರರ ಮೇಲೆ ಆತಂಕದ ಕಾರ್ಮೋಡ ಕವಿದಿದೆ. ಇತ್ತ ಸರ್ಕಾರ ಬೆಂಬಲ‌ ಬೆಲೆ ಘೋಷಣೆ‌ ಮಾಡುತ್ತಾ ಎಂದು ರೈತರು ಕಾದು ಕುಳಿತಿದ್ದಾರೆ.

ಮೊದಲೆಲ್ಲ ಒಂದು ಎಕರೆ ಭತ್ತ ಬೆಳೆಯಲು 15-20 ಸಾವಿರ ಖರ್ಚಾಗುತ್ತಿತ್ತು. ಈಗ 30 ರಿಂದ 40 ಸಾವಿರ ಖರ್ಚು ತಗಲುತ್ತಿದೆ. ಸಸಿಗೆ 1500, ಟ್ರ್ಯಾಕ್ಟರ್​ಗೆ 5000, ನಾಟಿಗೆ 2500, ಕಳೆನಾಶಕ ಸಿಂಪಡಣೆಗೆ 1000, 1ನೇ ಗೊಬ್ಬರ 2000, ಒಂದನೇ ಕಳೆ 500, ಮೂರು ಬಾರಿ ಔಷಧಿ ಸಿಂಪಡಣೆಗೆ 5000, 2 ಹಾಗೂ 3 ನೇ ಗೊಬ್ಬರಕ್ಕೆ 5000, ಕೋಯ್ಲು 3000, 2 ಹಾಗೂ 3 ನೇ ಕಳೆ 1000 ಸೇರಿದಂತೆ ಕೂಲಿಗಳಿಗೆ ಇನ್ನಿತರೆ ಸೇರಿ ಒಟ್ಟು 30 ರಿಂದ 40000 ರೂಪಾಯಿ‌ ಖರ್ಚು ತಗುಲುತ್ತದೆ.

ಪಾತಾಳಕ್ಕಿಳಿದ ಭತ್ತದ ಬೆಳೆ... ಆತಂಕದಲ್ಲಿ ರೈತರು

ಒಂದು ಎಕರೆ ಭತ್ತ ಬೆಳೆಯಲು 30 ರಿಂದ 40 ಸಾವಿರ ಖರ್ಚು ಮಾಡಿ, ಸುಮಾರು 25 ರಿಂದ 30 ಕ್ವಿಂಟಾಲ್ ಭತ್ತ ಬೆಳೆಯಬಹುದಾಗಿದೆ. ಈಗಿನ ದರದ ಅನ್ವಯ ಸುಮಾರು 40 ರಿಂದ 50 ಸಾವಿರ ರೂ. ಒಂದು ಎಕರೆಗೆ ಬೆಳೆಯ ನಂತರ ಸಿಗುತ್ತದೆ. ಇದರಲ್ಲಿ ನೀರು ಸಿಗದಿದ್ದರೆ, ಭತ್ತ ಒಣಗಿ ಹೋಗಿದ್ದರೆ ಇಷ್ಟು ಇಳುವರಿ ಸಿಗುವುದು ಅನುಮಾನ. ಅತಿವೃಷ್ಠಿ, ಅನಾವೃಷ್ಠಿ ಹಾಗೂ ಬೆಳೆಗೆ ರೋಗ ಬಿದ್ದರೆ ರೈತರ ಪಾಡು ಅಧೋಗತಿ. ಗೊಬ್ಬರಕ್ಕೆ ಯಾವಾಗಲೂ ಫಿಕ್ಸ್ ದರ ಇರುತ್ತದೆ. ಆದರೆ, ಭತ್ತಕ್ಕೆ ಮಾತ್ರ ನಿಗದಿತ ದರ ಇಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ರೈತರಿಗೆ ಕ್ವಿಂಟಾಲ್ ಭತ್ತಕ್ಕೆ 2200 ರಿಂದ 2500 ಸಾವಿರ ಸಿಕ್ಕರೆ ಲಾಭವಾಗಲಿದೆ. ಈ ದರ ಸಿಗದೇ ಇದ್ದರೆ ರೈತರಿಗೆ ಲಾಭ ಕಷ್ಟ ಸಾಧ್ಯ. ಹೀಗಾಗಿ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದರೆ ರೈತರ ಬದುಕು ಹಸನಾಗಲಿದೆ.

ABOUT THE AUTHOR

...view details