ದಾವಣಗೆರೆ: ಜಿಲ್ಲೆಯಲ್ಲಿ ಜಿಮ್ಗಳನ್ನು ಆರಂಭಿಸಲು ಜೂನ್ 8 ರಿಂದ ಅವಕಾಶ ನೀಡಬೇಕು. ಇಲ್ಲದಿದ್ದರೆ ಮಾಲೀಕರು, ತರಬೇತುದಾರರು, ಕ್ರೀಡಾಪಟುಗಳು ಸೇರಿಕೊಂಡು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಜಿಮ್ ಅಸೋಸಿಯೇಷನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಜಿಮ್ ತೆರೆಯಲು ಅನುಮತಿ ನೀಡದಿದ್ದರೆ ಪ್ರತಿಭಟನೆ: ಜಿಮ್ ಅಸೋಸಿಯೇಷನ್ ಎಚ್ಚರಿಕೆ - gym association news in davanagere
ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದ್ರೆ, ಜಿಮ್ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ. ಎಲ್ಲದಕ್ಕೂ ಒಪ್ಪಿಕೊಂಡರೂ ಏಕೆ ಅನುಮತಿ ನೀಡುತ್ತಿಲ್ಲ ಅನ್ನೋದು ಗೊತ್ತಾಗುತ್ತಿಲ್ಲ ಎಂದು ಜಿಮ್ ಮಾಲೀಕರು ಅಳಲು ತೋಡಿಕೊಂಡರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಮ್ ಮಾಲೀಕರು, ಜಿಮ್ ನಂಬಿಕೊಂಡು ಬದುಕುತ್ತಿದ್ದವವರು ತುಂಬಾನೇ ಕಷ್ಟದಲ್ಲಿದ್ದಾರೆ. ಇದುವರೆಗೆ ಒಂದೇ ಒಂದು ಆಹಾರ ಕಿಟ್ ಅನ್ನು ಕೂಡಾ ಸಹ ಸರ್ಕಾರ ನೀಡಿಲ್ಲ. ಮದ್ಯದಂಗಡಿಗಳನ್ನು ತೆರೆಯಲು ಅನುಮತಿಸಲಾಗಿದೆ. ಆದ್ರೆ, ನಮಗೆ ಅನುಮತಿ ನೀಡಿಲ್ಲ. ಸರ್ಕಾರ ನೀಡುವ ಮಾರ್ಗಸೂಚಿಗಳನ್ನು ಪಾಲಿಸುತ್ತೇವೆ. ಎಲ್ಲದಕ್ಕೂ ಒಪ್ಪಿಕೊಂಡರೂ ಏಕೆ ಅನುಮತಿ ನೀಡುತ್ತಿಲ್ಲ ಅನ್ನೋದೇ ಗೊತ್ತಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಸಾಯಿ ಜಿಮ್ ಮಾಲೀಕ ಸಾಯಿನಾಥ್ ಮಾತನಾಡಿ, ನಗರದಲ್ಲಿ ಸುಮಾರು 80 ಕ್ಕೂ ಹೆಚ್ಚು ಜಿಮ್ ಸೆಂಟರ್‌ಗಳಿವೆ. ಅವುಗಳನ್ನೇ ನಂಬಿಕೊಂಡು ನೂರಾರು ತರಬೇತುದಾರರು ಜೀವನ ಸಾಗಿಸುತ್ತಿದ್ದಾರೆ. ಲಾಕ್ಡೌನ್ ಬಳಿಕ ಬದುಕು ತುಂಬಾನೇ ಕಷ್ಟವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಜಿಮ್ಗಳನ್ನು ತೆರೆಯಲಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಮಾಲೀಕರು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಟ್ರೈನರ್ಗಳಿಗೆ ಸಂಬಳ, ಕರೆಂಟ್ ಬಿಲ್, ಬಾಡಿಗೆ, ಜಿಮ್‌ನಲ್ಲಿರುವ ಮೆಷಿನ್‌ಗಳ ನಿರ್ವಹಣೆ ಕಷ್ಟವಾಗಿದೆ ಎಂದರು.