ಕರ್ನಾಟಕ

karnataka

ETV Bharat / state

ಲಾಕ್​ಡೌನ್​​ ನಡುವೆ ಪಾಲಿಕೆಯಲ್ಲಿ‌ ಹುಟ್ಟುಹಬ್ಬ ಆಚರಿಸಿಕೊಂಡ ಮೇಯರ್ ; ಕಾಂಗ್ರೆಸ್ ಕಿಡಿ - davanagere latest news 2020

ಕಾನೂನು ಎಲ್ಲರಿಗೂ ಒಂದೇ.‌ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ತಪ್ಪು ಮಾಡಿದರೆ ಕ್ರಮಕೈಗೊಳ್ಳಬೇಕು.‌ ಜನಸಾಮಾನ್ಯರಿಗೆ ಒಂದು ಕಾನೂನು, ಮೇಯರ್‌ಗೆ ಒಂದು ಕಾನೂನು ಇದೆಯಾ?.‌.

devaramane shivkumar
ದೇವರಮನೆ ಶಿವಕುಮಾರ್

By

Published : Jul 6, 2020, 5:13 PM IST

ದಾವಣಗೆರೆ :ಮಹಾನಗರಪಾಲಿಕೆಯಲ್ಲಿ ಮೇಯರ್ ಅಜಯ್‌ಕುಮಾರ್ ಹುಟ್ಟುಹಬ್ಬ ಆಚರಿಸಿಕೊಂಡಿರುವುದಕ್ಕೆ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇಯರ್ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮೇಯರ್‌ ವಿರುದ್ಧ ಕಾಂಗ್ರೆಸ್ ಮುಖಂಡರ ಆಕ್ರೋಶ
ನಗರದಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್, ಕೊರೊನಾ‌ ಸೋಂಕು ತಡೆಗೆ ರಾಜ್ಯ ಸರ್ಕಾರವು ಸಂಡೇ ಲಾಕ್​ಡೌನ್​ಗೆ ಕರೆ ನೀಡಿತ್ತು. ಹೆಚ್ಚು ಜನ ಭಾಗಿಯಾಗಬಾರದು ಎಂಬ ಆದೇಶ ಹೊರಡಿಸಿತ್ತು. ಆದರೆ, ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಅಜಯ್ ಕುಮಾರ್ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ವೇಳೆ ಸಾಮಾಜಿಕ ಅಂತರವೂ ಇರಲಿಲ್ಲ, ಮಾಸ್ಕ್ ಧರಿಸಿರಲಿಲ್ಲ.‌ ಎಲ್ಲಾ ಬುದ್ಧಿವಂತಿಕೆ, ರಾಜಕೀಯ ಅನುಭವ ಇದ್ದವರೇ ಹೀಗೆ ಮಾಡಿದ್ರೆ ಹೇಗೆ ಎಂದು ಪ್ರಶ್ನಿಸಿದರು.
ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ಡಿ.‌ಬಸವರಾಜ್, ಕಾನೂನು ಎಲ್ಲರಿಗೂ ಒಂದೇ.‌ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ತಪ್ಪು ಮಾಡಿದರೆ ಕ್ರಮಕೈಗೊಳ್ಳಬೇಕು.‌ ಜನಸಾಮಾನ್ಯರಿಗೆ ಒಂದು ಕಾನೂನು ಮೇಯರ್‌ಗೆ ಒಂದು ಕಾನೂನು ಇದೆಯಾ?.‌ ಜನರಲ್ಲಿ ‌ಅರಿವು ಮೂಡಿಸುವವರೇ ಉಲ್ಲಂಘನೆ ಮಾಡಿದ್ದಾರೆ.‌ ಬಡಾವಣೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ರಾಜಕೀಯ ಒತ್ತಡಕ್ಕೆ‌ ಮಣಿಯದೇ ಕಾನೂನು ರೀತಿಯ ಕ್ರಮಕೈಗೊಳ್ಳಬೇಕು. ಎಸ್ಪಿ ಅವರು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಕ್ರಮ ತೆಗೆದುಕೊಳ್ಳದಿದ್ರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ABOUT THE AUTHOR

...view details