ಕರ್ನಾಟಕ

karnataka

ETV Bharat / state

ವಿರೋಧ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಮಾತ್ರ ಮಾಡುತ್ತಿವೆ: ಸಿಎಂ - ದಾವಣಗೆರೆಯಲ್ಲಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟಿಸಿದ ಸಿಎಂ

ಜಗಳೂರು ಇನ್ನು ಮುಂದೆ ಬರದ ನಾಡಲ್ಲ, ಜಲದ ನಾಡಗಿ ಬ‌ದಲಾಗುತ್ತದೆ. ಕೇವಲ ಇದೊಂದೆ ಯೋಜನೆ ಅಲ್ಲ 57 ಕೆರೆ ಯೋಜನೆ ಕೂಡ ಮುಕ್ತಾಯ ಮಾಡಿದ್ದೇವೆ. ನೀರಾವರಿ ಕ್ರಾಂತಿ ಜಗಳೂರಿನಲ್ಲಿ‌ ನಡೆಯುತ್ತದೆ. ನರೇಂದ್ರ ಮೋದಿಯವರು ಭದ್ರ ಮೇಲ್ದಂಡೆ ಯನ್ನು ರಾಷ್ಟ್ರೀಯ ಪ್ರಾಜೆಕ್ಟ್ ಎಂದು ಮುಂದಿನ ಬಜೆಟ್ ನಲ್ಲಿ ಅನುಮೋದನೆ ‌ನೀಡುತ್ತಾರೆ ಎಂದು ಸಿಎಂ ಹೇಳಿದ್ದಾರೆ.

ವಿರೋಧ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಮಾತ್ರ ಮಾಡುತ್ತಿವೆ ಎಂದ ಸಿಎಂ
ವಿರೋಧ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಮಾತ್ರ ಮಾಡುತ್ತಿವೆ ಎಂದ ಸಿಎಂ

By

Published : Apr 29, 2022, 7:24 PM IST

Updated : Apr 29, 2022, 9:23 PM IST

ದಾವಣಗೆರೆ: ಕೃಷಿ ಹಾಗೂ ಕೈಗಾರಿಕಾ ಕ್ರಾಂತಿಯನ್ನು ನಮ್ಮ ಸರ್ಕಾರ ಮಾಡುತ್ತದೆ, ವಿರೋಧ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಮಾತ್ರ ಮಾಡುತ್ತವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಉದ್ಘಾಟಿಸಿ ವಿಪಕ್ಷಗಳಿಗೆ ಟಾಂಗ್ ನೀಡಿದರು. ಜಿಲ್ಲೆಯ ಜಗಳೂರಿನಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರ ಆಶೀರ್ವಾದದಲ್ಲಿ ಈ ಬರದ ನಾಡಿಗೆ ಗಂಗೆ ಹರಿಸುತ್ತೇವೆ. ಯಡಿಯೂರಪ್ಪ ನೇತೃತ್ವದಲ್ಲಿ ಅಪ್ಪರ್ ಭದ್ರ ಯೋಜನೆ ಮಾಡಲು ಶುರು ಮಾಡಲಾಗಿದೆ. ಯಡಿಯೂರಪ್ಪನವರ ಧಿಟ್ಟ ನಿಲುವಿನಿಂದ ಹಣ ಬಿಡುಗಡೆಯಾಗಿದೆ. ಈ ಭಾಗಕ್ಕೆ ನೀರು ಕೊಡುವ ಶಕ್ತಿ ಇರೋದು ಯಡಿಯೂರಪ್ಪನವರಿಗೆ ಮಾತ್ರ ಎಂದು ಬಿಎಸ್​ವೈರನ್ನು ಸ್ಮರಿಸಿಕೊಂಡರು.

ಇದನ್ನೂ ಓದಿ:ತಾಂಜೇನಿಯಾ ದೇಶದ ಮೌಂಟ್ ಕಿಲಿಮಾಂಜರ್ ಏರಿದ ಹೊನ್ನಾಳಿಯ ಅರಣ್ಯ ರಕ್ಷಕ!

ವಿರೋಧ ಪಕ್ಷಗಳು ಓಟ್ ಬ್ಯಾಂಕ್ ರಾಜಕಾರಣ ಮಾತ್ರ ಮಾಡುತ್ತಿವೆ: ಸಿಎಂ

ಜಗಳೂರು ಜಲದ‌ನಾಡು: ಜಗಳೂರು ಇನ್ನು ಮುಂದೆ ಬರದ ನಾಡಲ್ಲ, ಜಲದ ನಾಡಗಿ ಬ‌ದಲಾಗುತ್ತದೆ. ಕೇವಲ ಇದೊಂದೆ ಯೋಜನೆ ಅಲ್ಲ 57 ಕೆರೆ ಯೋಜನೆ ಕೂಡ ಮುಕ್ತಾಯ ಮಾಡಿದ್ದೇವೆ. ನೀರಾವರಿ ಕ್ರಾಂತಿ ಜಗಳೂರಿನಲ್ಲಿ‌ ನಡೆಯುತ್ತದೆ. ನರೇಂದ್ರ ಮೋದಿಯವರು ಭದ್ರ ಮೇಲ್ದಂಡೆ ಯನ್ನು ರಾಷ್ಟ್ರೀಯ ಪ್ರಾಜೆಕ್ಟ್ ಎಂದು ಮುಂದಿನ ಬಜೆಟ್ ನಲ್ಲಿ ಅನುಮೋದನೆ ‌ನೀಡುತ್ತಾರೆ. 16 ಸಾವಿರ ಕೋಟಿ ರೂಪಾಯಿ ಈ ಯೋಜನೆಗೆ ಅನುದಾನ ಬರುತ್ತದೆ ಎಂದು ಹೇಳಿದರು.

ಯುವಕ ಪರವಾಗಿರುವ ಬಜೆಟ್: ನಮ್ಮ ಬಜೆಟ್ ಯುವಕ ಪರವಾಗಿರುವ ಬಜೆಟ್ ಆಗಿದೆ. ನಮ್ಮ ಬಜೆಟ್ ಸೂಕ್ಷ್ಮವಾದ ಬಜೆಟ್ ಆಗಿದೆ. ಎಲ್ಲೆಲ್ಲಿ ನೊಂದವರು ಇದ್ದಾರೋ ಅವರಿಗೆ ನೆರವಾಗುವ ವಿಷಯ ಬಜೆಟ್ ನಲ್ಲಿ‌ ಒದೆ. ದೀನ ದಲಿತರ ಎಸ್​- ಎಸ್ಟಿ ಅಭಿವೃದ್ಧಿಗೆ ಶ್ರಮಿಸಿದ್ದು, ನವ ಕರ್ನಾಟಕ ನವಭಾರತ ಎನ್ನುವ ಮುನ್ನುಡಿ ಇಟ್ಟುಕೊಂಡು‌ ನಡೆಯುತ್ತಿದ್ದೇವೆ ಎಂದು ತಿಳಿಸಿದರು.

Last Updated : Apr 29, 2022, 9:23 PM IST

For All Latest Updates

TAGGED:

ABOUT THE AUTHOR

...view details