ದಾವಣಗೆರೆ:ಮುಖ್ಯಮಂತ್ರಿ ಆಗಿದ್ದಾಗ ಎಲ್ಲಾ ಕಚೇರಿ, ಸಂಘ-ಸಂಸ್ಥೆಗಳಲ್ಲಿ ಸಂತ ಸೇವಾಲಾಲ್ ಜಯಂತಿ ಆಚರಣೆ ಜಾರಿಗೆ ತಂದಿದ್ದು ನಾನು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಓದಿ: ರಾಜ್ಯದಲ್ಲಿಂದು 414 ಮಂದಿಗೆ ಕೊರೊನಾ ದೃಢ: ಇಬ್ಬರು ಸೋಂಕಿತರು ಬಲಿ
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಿದ್ದಾಗ ಬಂಜಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರು. ಆಗ 20 ಕೋಟಿ ರೂ. ಮಾತ್ರ ಇಟ್ಟಿದ್ದರು. 120 ಕೋಟಿ ರೂ.ಗೆ ಏರಿಕೆ ಮಾಡಿದ್ದು ನಾನು. ಬಹಳ ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ ಎಂದರು.
ಹಟ್ಟಿ, ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ನಮ್ಮ ಸರ್ಕಾರ. ಈಗ ಕೆಲ ಕಾರಣಾಂತರಗಳಿಂದ ಅವು ನಿಂತು ಹೋಗಿದೆ. ಮುಂದಿನ ಅಧಿವೇಶನದಲ್ಲಿ ನಿಮ್ಮ ಪರವಾಗಿ ನಾನು ಕಂದಾಯ ಗ್ರಾಮಗಳಿಗಾಗಿ ಒತ್ತಾಯ ಮಾಡುತ್ತೇನೆ. ಸರ್ಕಾರದ ಎಲ್ಲಾ ಸೌಲಭ್ಯಗಳು ನಿಮ್ಮ ತಾಂಡಾಗಳಿಗೆ ಸಿಗಬೇಕು ಎಂದರೆ ಕಂದಾಯ ಗ್ರಾಮಗಳಾಗಬೇಕು. ಸಂತ ಸೇವಾಲಾಲ್ ಪುಣ್ಯ ಕ್ಷೇತ್ರದ ಅಭಿವೃದ್ಧಿಗೆ 50 ಕೋಟಿ ರೂ. ನಮ್ಮ ಸರ್ಕಾರ ನೀಡಿದೆ ಎಂದು ತಮ್ಮ ಸರ್ಕಾರದ ಸಾಧನೆ ಹೇಳಿಕೊಂಡರು.
ಯಾರು ಆ ಜಾತಿಯಲ್ಲೇ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ, ನಾನು ಕುರುಬ ಜಾತಿಯಲ್ಲೇ ಹುಟ್ಟಬೇಕು ಅಂತ ಹುಟ್ಟಿದ್ನಾ..? ನೀವು ಲಂಬಾಣಿ ಸಮಾಜದಲ್ಲಿ ಹುಟ್ಟಬೇಕು ಎಂದು ಹುಟ್ಟಿದ್ರಾ..? ಅರ್ಜಿ ಹಾಕಿಕೊಂಡು ಹುಟ್ಟಬಹುದಿದ್ದರೆ ಅರ್ಜಿ ಹಾಕಿ ಮೇಲ್ಜಾತಿಗೆ ಹುಟ್ಟುತ್ತಿದ್ದರು. ಯಾಕೆ ಈ ಕಷ್ಟ, ಅವಮಾನ, ಕಡೆಗಣನೆ ಅಂತ ಮೇಲ್ಜಾತಿಗೆ ಹುಟ್ಟುತ್ತಿದ್ದರು. ರೇಣುಕಾಚಾರ್ಯ ಏನಾದರು ಜಂಗಮ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿದ್ನಾ ಎಂದು ಗೇಲಿ ಮಾಡಿದರು.
ಬಸವಣ್ಣ, ಇವನ್ಯಾರವಾ ಇವನ್ಯಾರವಾ ಇವಾ ನಮ್ಮವಾ ಇವಾ ನಮ್ಮವಾನೆನಿಸಯ್ಯ ಎಂದು ಹೇಳಿದ್ದಾರೆ. ಏನಾಯ್ಯ ರೇಣುಕಾಚಾರ್ಯ ಇದು ಆಗ್ತಾ ಇದೀಯೇನಯ್ಯಾ ಎಂದು ಮತ್ತೊಮ್ಮೆ ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದರು.