ಕರ್ನಾಟಕ

karnataka

ETV Bharat / state

ದಾವಣಗೆರೆಯಲ್ಲಿ ಮತ್ತೆ ಒಂದು ಕೊರೊನಾ ಪಾಸಿಟಿವ್: ಒಬ್ಬರು ಗುಣಮುಖರಾಗಿ ಬಿಡುಗಡೆ - ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ

6 ಸಾವು ಸಂಭವಿಸಿದ ದಾವಣಗೆರೆ ಜಿಲ್ಲೆಯಲ್ಲಿ ಇಂದು ಮತ್ತೊಬ್ಬನಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ. ಈ ನಡುವೆ ಇಬ್ಬರು ಗುಣಮುಖರಾಗಿದ್ದಾರೆ.

One more positive case found in Davanagere
ಸಂಗ್ರಹ ಚಿತ್ರ

By

Published : Jun 15, 2020, 11:40 PM IST

ದಾವಣಗೆರೆ: ಜಿಲ್ಲೆಯಲ್ಲಿ ಇಂದು ಮತ್ತೆ ಒಂದು ಕೊರೊನಾ ಪಾಸಿಟಿವ್ ವರದಿಯಾಗಿದ್ದು, ಒಬ್ಬರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

90 ವರ್ಷದ ವೃದ್ಧ (ರೋಗಿ ಸಂಖ್ಯೆ 7208) ತೀವ್ರ ಉಸಿರಾಟದ ತೊಂದರೆ ಹಿನ್ನೆಲೆ ಹೊಂದಿದ್ದಾರೆ. ಮತ್ತೊಬ್ಬರು (ರೋಗಿ ಸಂಖ್ಯೆ 4085) ಸಂಪೂರ್ಣ ಗುಣಮುಖರಾಗಿ ಇಂದು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಒಟ್ಟು 227 ಪ್ರಕರಣಗಳ ಪೈಕಿ 195 ಸೋಂಕಿತರು ಇದುವರೆಗೆ ಬಿಡುಗಡೆ ಹೊಂದಿದ್ದಾರೆ. 6 ಸಾವು ಸಂಭವಿಸಿದ್ದು, 26 ಸಕ್ರಿಯ ಪ್ರಕರಣಗಳಿವೆ.

ABOUT THE AUTHOR

...view details