ದಾವಣಗೆರೆ: ಬೈಕ್ ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಗಳೂರು ತಾಲೂಕಿನ ರಸ್ತಮಾಚಿಕೆರೆ ಗ್ರಾಮದ ಕೆರೆಯ ಬಳಿ ಸಂಭವಿಸಿದೆ.
ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಡಕಲಕಟ್ಟೆ ಗ್ರಾಮದ ಮಹಾಂತೇಶ್ ಮೃತ ಬೈಕ್ ಸವಾರ. ಹಿಂಬದಿ ಕುಳಿತಿದ್ದ ಪೂಜಾರ್ ಬೋಪಣ್ಣ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.