ದಾವಣಗೆರೆ :ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬವನ್ನು ಒಂದು ದಿನ ಮುಂಚಿತವಾಗಿ ನಗರದಲ್ಲಿ ಕಿಚ್ಚನ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಆಚರಿಸಲಾಯಿತು.
ಒಂದು ದಿನ ಮುಂಚಿತವಾಗಿ ಕಿಚ್ಚ ಸುದೀಪ್ ಬರ್ತ್ ಡೇ - ಕಿಚ್ಚ ಸುದೀಪ್
ಮಂಗಳವಾರ ದುರ್ಗಾಂಬಿಕೆ ದೇವಿಯ ಪವಿತ್ರ ದಿನ. ಈ ಹಿನ್ನೆಲೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸುದೀಪ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು..

ಒಂದು ದಿನ ಮುಂಚಿತವಾಗಿ ಕಿಚ್ಚ ಸುದೀಪ್ ಬರ್ತ್ ಡೇ
ಕಿಚ್ಚ ಅಭಿಮಾನಿಗಳಿಂದ ದುರ್ಗಾಂಬಿಕೆ ದೇಗುಲದಲ್ಲಿ ವಿಶೇಷ ಪೂಜೆ
ನಗರದ ನಿಟುವಳ್ಳಿಯ ದುರ್ಗಾಂಬಿಕೆ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಿಚ್ಚನ ಅಭಿಮಾನಿಗಳು ನೆಚ್ಚಿನ ನಟನಿಗೆ ದೇವಿ ಹೆಚ್ಚಿನ ಆಯುಷ್ಯ, ಆರೋಗ್ಯ ನೀಡಲಿ. ಮುಂದಿನ ಎಲ್ಲಾ ಸಿನಿಮಾಗಳು ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿದರು. ಪ್ರತಿ ವರ್ಷವೂ ದಾವಣಗೆರೆಯಲ್ಲಿ ಒಂದು ದಿನ ಮುಂಚಿತವಾಗಿಯೇ ಸುದೀಪ್ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ. ಅದೇ ರೀತಿ ಈ ವರ್ಷವೂ ಆಚರಿಸಲಾಯಿತು.
ಮಂಗಳವಾರ ದುರ್ಗಾಂಬಿಕೆ ದೇವಿಯ ಪವಿತ್ರ ದಿನ. ಈ ಹಿನ್ನೆಲೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಸುದೀಪ್ ಕಟೌಟ್‌ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು. ಅಲ್ಲದೇ ಕೊರೊನಾ ತೊಲಗಿ ಜನರಲ್ಲಿ ಸಂಭ್ರಮ ತರಲಿ ಎಂದು ಪ್ರಾರ್ಥಿಸಿದರು.