ದಾವಣಗೆರೆ: ಲಾಕ್ ಡೌನ್ ಇರುವುದರಿಂದ ವೃದ್ಧಾಪ್ಯ ವೇತನ ಪಡೆಯಲು ವೃದ್ಧರು ಪರದಾಡುತ್ತಿದ್ದಾರೆ. ಬೆಳ್ಳಂ ಬೆಳಗ್ಗೆಯೇ ನೂರಾರು ವೃದ್ಧರು ವೇತನ ಪಡೆಯಲು ಸಾಲಾಗಿ ಕುಳಿತಿದ್ದಾರೆ. ಆದರೆ ಅಂಚೆ ಕಚೇರಿ ಆರಂಭವಾಗುವುದು ತಡವಾದ ಕಾರಣ ತಾವು ಕುಳಿತ ಜಾಗದಲ್ಲೇ ಕಾಯುತ್ತಿದ್ದಾರೆ.
ದಾವಣಗೆರೆಯಲ್ಲಿ ವೃದ್ಧಾಪ್ಯ ವೇತನ ಪಡೆಯಲು ಪರದಾಟ: ಉರಿ ಬಿಸಿಲಲ್ಲಿ ಕಾದು ಕುಳಿತ ಹಿರಿಯ ಜೀವಗಳು - old-age pension in Davanagere
ವೃದ್ಧಾಪ್ಯ ವೇತನ ಪಡೆಯಲು ನಗರದ ಗಡಿಯಾರ ಕಂಬದ ಬಳಿ ಇರುವ ಮುಖ್ಯ ಅಂಚೆ ಕಚೇರಿ ಬಳಿ ವೃದ್ಧರು ಬೆಳಗ್ಗೆಯಿಂದಲೇ ಕಾಯುತ್ತಿದ್ದು, ಅವರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.

ವೃದ್ಧಾಪ್ಯ ವೇತನ ಪಡೆಯಲು ಪರದಾಡುತ್ತಿರುವ ವೃದ್ಧರು
ವೇತನ ಪಡೆಯಲು ನಗರದ ಗಡಿಯಾರ ಕಂಬದ ಬಳಿ ಇರುವ ಮುಖ್ಯ ಅಂಚೆ ಕಚೇರಿ ಬಳಿ ವೃದ್ಧರು ಬೆಳಗ್ಗೆಯಿಂದಲೇ ಕಾಯುತ್ತಿದ್ದು, ಅವರ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ.
ಬಿಸಿಲಿನ ಧಗೆ ಬೇರೆ. ನಿಲ್ಲಲು, ಕುಳಿತುಕೊಳ್ಳಲು ಆಗಲ್ಲ. ಆಮೇಲೆ ತಡವಾದರೆ ನಮ್ಮನ್ನು ಹಾಗೆಯೇ ಕಳುಹಿಸಿ ಬಿಡುತ್ತಾರೆ. ಹಾಗಾಗಿ ಬೆಳಗ್ಗೆಯೇ ತೆಗೆದುಕೊಂಡು ಹೋಗಲು ಬಂದಿದ್ದೇವೆ. ನಮ್ ಕಷ್ಟ ಯಾರಿಗೆ ಹೇಳೋಣ ಎಂದು ವೃದ್ಧರು ಬೇಸರ ವ್ಯಕ್ತಪಡಿಸುತ್ತಾರೆ.