ಹರಿಹರ (ದಾವಣಗೆರೆ) :ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆ ಜಿಲ್ಲಾಡಳಿತದ ಆದೇಶದಂತೆ ಕೋಳಿಗಳನ್ನು ನಾಶಪಡಿಸಲು ಬಂದಿದ್ದ ಅಧಿಕಾರಿಗಳ ಎದುರು ಮಕ್ಕಳಂತೆ ಸಾಕಿಕೊಂಡಿದ್ದ ಕೋಳಿಗಳನ್ನು ಕೊಲ್ಲದಂತೆ ವೃದ್ಧೆಯೋರ್ವರು ಗೋಳಾಡಿದ ಘಟನೆ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ನಡೆಯಿತು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಕೋಳಿಗಳನ್ನು ನಾಶಪಡಿಸಲು ಜಿಲ್ಲಾಡಳಿತವು ಕಿಲ್ಲಿಂಗ್ ಆರ್ಡರ್ ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಮದಲ್ಲಿನ ಕೋಳಿ ಹಾಗೂ ಸಾಕು ಪಕ್ಷಿಗಳನ್ನು ಹಿಡಿದು ನಾಶಪಡಿಸಿ, ಗುಂಡಿಯಲ್ಲಿ ಹಾಕಿ ಮುಚ್ಚುವ ಕಾರ್ಯ ಕೈಗೊಂಡರು.