ಕರ್ನಾಟಕ

karnataka

ETV Bharat / state

World Photography Day: ದಾವಣಗೆರೆಯಲ್ಲಿ 1920ರ ದಶಕದ ಕ್ಯಾಮೆರಾಗಳ ಪ್ರದರ್ಶನ

World Photography Day: 184ನೇ ಛಾಯಾಗ್ರಾಹಕರ ದಿನಾಚರಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಹಳೆ ಕಾಲದ ಕ್ಯಾಮೆರಾಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಕ್ಯಾಮೆರಾಗಳ ಪ್ರದರ್ಶನ
ಕ್ಯಾಮೆರಾಗಳ ಪ್ರದರ್ಶನ

By

Published : Aug 18, 2023, 9:22 PM IST

Updated : Aug 19, 2023, 11:06 AM IST

ಹಳೆ ಕಾಲದ ಕ್ಯಾಮರಾಗಳ ಪ್ರದರ್ಶನ

ದಾವಣಗೆರೆ:184ನೇ ವಿಶ್ವ ಛಾಯಾಗ್ರಾಹಕರ ದಿನವನ್ನು (World Photography Day) ಜಿಲ್ಲೆಯ ಫೋಟೊಗ್ರಾಫರ್ಸ್ ವಿಭಿನ್ನವಾಗಿ ಆಚರಣೆ ಮಾಡಿದ್ದಾರೆ. 1920ರ ಕಾಲದಲ್ಲಿ ಬಳಕೆ ಮಾಡುತ್ತಿದ್ದ ಹಳೇ ಕ್ಯಾಮೆರಾಗಳನ್ನು ಪ್ರದರ್ಶನಕ್ಕಿಟ್ಟಿದ್ದು ಯುವಜನತೆಯನ್ನು ಆಕರ್ಷಿಸಿತು. ಪ್ರಸ್ತುತ ಮೊಬೈಲ್ ಜಮಾನದಲ್ಲಿ ಸುಲಭವಾಗಿ ಫೋಟೊ ತೆಗೆಯಬಹುದು. ಅದರೆ 1920ರ ಕಾಲದಲ್ಲಿ ಒಂದು ಫೋಟೊ ತೆಗೆಯಲು ಫೋಟೊಗ್ರಾಫರ್ಸ್​ ಎಷ್ಟು ಕಷ್ಟಪಡುತ್ತಿದ್ದರು ಎಂಬುದನ್ನು ಈ ಹಳೇ ಕ್ಯಾಮೆರಾಗಳು, ಅದರ ಬಿಡಿಭಾಗಗಳನ್ನು ಪ್ರದರ್ಶನಕ್ಕಿಡುವ ಮೂಲಕ ತೋರಿಸಲಾಯಿತು.

ಫೀಲ್ಡ್​ ಕ್ಯಾಮರಾ

ಫೋಟೋಗ್ರಾಫರ್ ಯೂತ್ ವೆಲ್​ಫೇರ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕ್ಯಾಮೆರಾಗಳ ಪ್ರದರ್ಶನದಲ್ಲಿ ಸುಮಾರು ನೂರಕ್ಕೂ ಹೆಚ್ಚು ತರಹೇವಾರಿ ಕ್ಯಾಮೆರಾಗಳು ಹಾಗು ಅದರ ಬಿಡಿಭಾಗಗಳು ಪ್ರದರ್ಶನಗೊಂಡವು. ವಿ8 ಸೋನೊ ಹ್ಯಾಂಡಿ ಕ್ಯಾಮೆರಾ, ನಿಕಾನ್ ಯುನಿಟಿಕ್, ಎಸ್ಎಬಿಎ ಯುನಿಟಿಕ್, ಜೆವಿಸಿ ಜಿ ಎಕ್ಸ್, ನಿಕಾನ್ ಡಿ70, ಕೆನಾನ್ ಇಓಎಸ್​ ಕಿಸ್, ಮಿಕಾನ್ ಎಫ್ಜಿ-02, ಯಶೀಕಾಎಮ್ ಡಿ-35, ಯಶೀಕಾ ಎಮ್ ಜಿ-1, ಕೆನಾನ್ 530, ಹ್ಯಾಟ್ ಶಾಟ್ ಕ್ಯಾಮೆರಾ, ಕೆನಾನ್ 135, ಮಿಕ್ಸರ್, ಪ್ಯಾನಾಸೋನಿಕ್ ಮಿಕ್ಸರ್, ಕೆನಾನ್ ಹೆಚ್​ಇಎಡಿ ವಿಡಿಯೋ ರೆಕಾರ್ಡರ್. 1926ರ ಪ್ಲೇಡ್ ಕ್ಯಾಮೆರಾ, ಫಿಲ್ಡ್ ಕ್ಯಾಮೆರಾ, ಹೀಗೆ ಸಾಕಷ್ಟು ಕ್ಯಾಮೆರಾಗಳು ನೋಡುಗರ ಗಮನ ಸೆಳೆದವು.

ಪುರಾತನ ಕ್ಯಾಮರಾ

ಸಂಘದ ಅಧ್ಯಕ್ಷ ಶ್ರೀನಾಥ್ ಪ್ರತಿಕ್ರಿಯಿಸಿ, ಹಳೇ ಕ್ಯಾಮರಾಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಹೇಳಲು ಪ್ರದರ್ಶನ ಏರ್ಪಡಿಸಲಾಗಿದೆ. ಪ್ರದರ್ಶನದಲ್ಲಿ 120 ವರ್ಷಗಳ ಹಳೇಯ 100ಕ್ಕೂ ಹೆಚ್ಚು ಕ್ಯಾಮೆರಾಗಳನ್ನು ತೋರಿಸಲಾಗಿದೆ. ಒಲಪ್ಪಾಸ್, ಜೆನಿಕೊ ನೆಚ್ಚಿನ ಕಂಪನಿಗಳ ಹಳೇ ಕ್ಯಾಮರಾಗಳಾಗಿದ್ದು, ಇಂದಿನ ಜನಕ್ಕೆ ನೋಡಲು ಎಲ್ಲೂ ಸಿಗದ ಕಾರಣ ಈ ವ್ಯವಸ್ಥೆ ಮಾಡಲಾಗಿದೆ ಎಂದರು.

ಕಾರ್ಯಕ್ರಮವನ್ನು ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಅವರ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟನೆ ಮಾಡಿದರು. ಕ್ಯಾಮೆರಾ ಮಾತ್ರವಲ್ಲದೇ ಕ್ಯಾಮೆರಾ ಫ್ಲ್ಯಾಶ್​ಗಳು, ಕ್ಯಾಮೆರಾ ಟ್ರೈಪ್ಯಾಡ್​ಗಳು, ವಿಸಿಆರ್​ಗಳು, ಬ್ಲಾಕ್ ಅಂಡ್ ವೈಟ್ ಫೋಟೊಗಳನ್ನು ಪ್ರಿಂಟ್ ಮಾಡುವ ಸಾಧನ, ಸ್ಟುಡಿಯೋ ಕ್ಯಾಮೆರಾದ ಸಾಧನಗಳು, ಹ್ಯಾಂಡಿ ಕ್ಯಾಮೆರಾಗಳು, ಫಿಲ್ಡ್ ಕ್ಯಾಮೆರಾ ಹೀಗೆ ಜನ ನೋಡದೇ ಇರುವ ವಿವಿಧ ರೀತಿಯ ಕ್ಯಾಮೆರಾ ಸಾಧನಗಳು ಕಂಡುಬಂದವು.

ಪ್ರಕ್ಟಿಕಾ ಕ್ಯಾಮರಾ

ಕ್ಯಾಮೆರಾಪ್ರಿಯರು ಕೂಡ ತಮ್ಮ ನೆಚ್ಚಿನ ಕ್ಯಾಮೆರಾಗಳನ್ನು ಕಣ್ತುಂಬಿಕೊಂಡರು. ಈ ವೇಳೆ ಫೋಟೋಗ್ರಾಫರ್ ಸಹಕಾರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಹಿಂದೆ ಒಂದು ಫೋಟೊ ತೆಗೆಯಲು ಯಾವ ರೀತಿ ಕಷ್ಟಪಡುತ್ತಿದ್ದರು ಎನ್ನುವುದನ್ನು ಈ ಕ್ಯಾಮೆರಾಗಳ ಮೂಲಕ ತಿಳಿಯಬಹುದು ಎಂದು ಹೇಳಿದರು.

ಇದನ್ನೂ ಓದಿ:'ದೇವರಾಜ ಅರಸು ಪ್ರಶಸ್ತಿ': ಸಂತಸ ವ್ಯಕ್ತಪಡಿಸಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ

Last Updated : Aug 19, 2023, 11:06 AM IST

ABOUT THE AUTHOR

...view details