ದಾವಣಗೆರೆ: ಮಳೆ ನೀರಿನಿಂದ ಇಲ್ಲಿನ ಅಡಕೆ ತೋಟಗಳು ಜಲಾವೃತವಾಗಿದ್ದು, ರೈತರು ಜಲಾವೃತವಾದ ತೋಟದಲ್ಲೇ ಅಡಿಕೆ ಕೊಯ್ಲು ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಬಳಿಯ ಕೆರೆಯಾಗಲಹಳ್ಳಿಯ ಜಮೀನುಗಳು ಬಾರಿ ಮಳೆಗೆ ಕೆರೆಕೋಡಿ ಬಿದ್ದು ಜಲಾವೃತವಾಗಿದೆ.
ಜಲಾವೃತವಾದ ತೋಟದಲ್ಲಿ ರೈತರು ಫಸಲಿಗೆ ಬಂದ ಅಡಕೆ ಕೊಯ್ಲು ಮಾಡಲು ಪರದಾಡುವಂತಾಗಿದೆ. ಸದ್ಯ ಅಡಕೆಗೆ ಉತ್ತಮ ಬೆಲೆ ದೊರೆಯುತ್ತಿದ್ದು, ಕ್ವಿಂಟಾಲ್ಗೆ 60 ಸಾವಿರ ರೂ. ತಲುಪಿರುವುದರಿಂದ ಜಲಾವೃತವಾದ ತೋಟದಲ್ಲಿಯೇ ರೈತರು ಅಡಕೆ ಕೊಯ್ಲು ಮಾಡುತ್ತಿದ್ದಾರೆ.