ದಾವಣಗೆರೆ: ಮೂರು ದಿನದ ಬಾಣಂತಿ ಸಾವಿಗೀಡಾಗಿದ್ದು, ಘಟನೆಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.
ಮೂರು ದಿನದ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ
ಸುಸ್ತಾಗುತ್ತಿದೆ ಎಂದ ಅನುಷಾ ಎಂಬುವರುಸ್ವಲ್ಪ ಸಮಯದಲ್ಲೇ ಸಾವಿಗೀಡಾಗಿದ್ದಾಳೆ. ಸಾವಿಗೂ ಮುನ್ನ ವೈದ್ಯರನ್ನು ಸಂಪರ್ಕಿಸಿದರೂ ಅವರು ಪ್ರತಿಕ್ರಿಯೆ ನೀಡಲಿಲ್ಲ ಎಂಬುದು ಪೋಷಕರ ಆರೋಪವಾಗಿದೆ.
ಮೂರು ದಿನದ ಬಾಣಂತಿ ಸಾವು
ಅನುಷಾ ಸಂಜೀವ್ (23) ಮೃತಪಟ್ಟ ಬಾಣಂತಿ. ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕಮದೋಡು ಗ್ರಾಮದ ನಿವಾಸಿ ಅನುಷಾ-ಸಂಜೀವ ಮದುವೆಯಾಗಿ ಒಂದೂವರೆ ವರ್ಷವಾಗಿತ್ತು, ಚೊಚ್ಚಲ ಹೆರಿಗೆಗೆಂದು ಶನಿವಾರ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ರು, ಸಿಜೇರಿಯನ್ ಮಾಡಿದ ಬೆನ್ನಲ್ಲೇ ಗಂಡು ಮಗು ಜನಿಸಿತ್ತು, ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸುಸ್ತಾಗುತ್ತಿದೆ ಎಂದ ಅನುಷಾ ಸ್ವಲ್ಪ ಸಮಯದಲ್ಲೇ ಸಾವಿಗೀಡಾಗಿದ್ದಾಳೆ.
ತಕ್ಷಣಕ್ಕೆ ವೈದ್ಯರ ಸಹಾಯ ಕೋರಿದರೂ ಅವರು ಸ್ಪಂದಿಸಲಿಲ್ಲ ಎಂದು ಮೃತಳ ಸಂಬಂಧಿಗಳ ಆರೋಪವಾಗಿದೆ.