ಕರ್ನಾಟಕ

karnataka

ETV Bharat / state

ಬೆಣ್ಣೆನಗರಿಯಲ್ಲಿ 32ಕ್ಕೇರಿದ ಸೋಂಕಿತರ ಸಂಖ್ಯೆ: ಜನರೆದೆಯಲ್ಲಿ ಆತಂಕ - Davanagere

ದಾವಣಗೆರೆಯಲ್ಲಿ ಒಟ್ಟಾರೆಯಾಗಿ 32 ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆಯಾಗಿವೆ. ನರ್ಸ್​ ಒಬ್ಬರಿಂದ ಒಟ್ಟು 19 ಜನರಿಗೆ ಸೋಂಕು ತಗುಲಿದ್ದು ಈಗಾಗಲೇ ವೃದ್ಧ ವ್ಯಕ್ತಿ ಹಾಗೂ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಕೊರೊನಾ ಪಾಸಿಟಿವ್ ಪ್ರಕರಣ
ಕೊರೊನಾ ಪಾಸಿಟಿವ್ ಪ್ರಕರಣ

By

Published : May 4, 2020, 8:08 PM IST

ದಾವಣಗೆರೆ:ಬೆಣ್ಣೆನಗರಿಯಲ್ಲಿ ಒಟ್ಟಾರೆ 32 ಕೊರೊನಾ ಪಾಸಿಟಿವ್ ಪ್ರಕರಣ ಕಂಡುಬಂದಿದ್ದು, ಭಾನುವಾರ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ. ಇದರಿಂದಾಗಿ ದಾವಣಗೆರೆ ಜನರು ಆತಂಕದಿಂದ ಬದುಕುವಂತಾಗಿದೆ.

ಬಾಷಾನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 533 ಸೋಂಕಿತ ಮಹಿಳೆಯಿಂದ 19 ಜನರಿಗೆ ಸೋಂಕು ತಗುಲಿರುವುದು ಆತಂಕ ಹೆಚ್ಚುವಂತೆ ಮಾಡಿದೆ. ಮಾತ್ರವಲ್ಲ, ಈ ಮಹಿಳೆ ಎರಡನೇ ಸಂಪರ್ಕದಲ್ಲಿದ್ದ ಮಹಿಳೆಯನ್ನು ಕೊರೊನಾ ಬಲಿ ತೆಗೆದುಕೊಂಡಿದೆ.

ಲಾಕ್‌ಡೌನ್ ಪರಿಣಾಮ ಖಾಲಿ ರಸ್ತೆ

ರೋಗಿ 533 ಪಿಹೆಚ್​​ಸಿ ಕೇಂದ್ರದ ನರ್ಸ್ ದ್ವಿತೀಯ ಸಂಪರ್ಕ ಹೊಂದಿದ್ದ ಮಹಿಳೆಯ ಸಾವು ಮತ್ತಷ್ಟು ಭಯ ಹುಟ್ಟಿಸಿದೆ. ರೋಗಿ 651 ಸಂಖ್ಯೆಯ 48 ವರ್ಷದ ಮಹಿಳೆ ಹೈಪರ್ ಟೆನ್ಷನ್, ಡಯಾಬಿಟಿಸ್, ಉಸಿರಾಟದ ತೊಂದರೆ ಎಂದು ಮೇ.1 ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಇವರು SARI ​​ನಿಂದ ಮೃತಪಟ್ಟಿದ್ದಾರೆ.

ನರ್ಸ್​ನಿಂದ ಒಟ್ಟು 19 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ವೃದ್ಧನ ಹಾಗೂ ಮಹಿಳೆಯ ಟ್ರಾವೆಲ್ ಹಿಸ್ಟರಿ ನಿಗೂಢವಾಗಿದೆ. ಇದನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ. ಮೇ.1 ರಂದು 69 ವರ್ಷದ ವೃದ್ಧ ಸಾವನ್ನಪ್ಪಿದ್ದರೂ ಸೋಂಕಿನ ಮೂಲ ಸ್ಪಷ್ಟವಾಗಿ ಗೊತ್ತಾಗಿಲ್ಲ.

ABOUT THE AUTHOR

...view details