ದಾವಣಗೆರೆ: ಜಿಲ್ಲೆಯಲ್ಲಿ ಲಾಕ್ಡೌನ್ ಮಾಡುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್ ಬೀಳಗಿ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಲಾಕ್ಡೌನ್ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ: ಜಿಲ್ಲಾಧಿಕಾರಿ ಸ್ಪಷ್ಟನೆ
ಜಿಲ್ಲೆಯಲ್ಲಿ ಒಟ್ಟು 81 ಕಂಟೇನ್ಮೆಂಟ್ ಝೋನ್ಗಳಿವೆ. ನಗರ ಪ್ರದೇಶಗಳಲ್ಲಿ 60, ಗ್ರಾಮೀಣ ಪ್ರದೇಶದಲ್ಲಿ 21 ಝೋನ್ಗಳಿವೆ. ಇಲ್ಲಿ ಮತ್ತಷ್ಟು ಬಿಗಿ ಕ್ರಮಕೈಗೊಳ್ಳುವಂತೆ ಸಿಎಂ ಯಡಿಯೂರಪ್ಪ ಅವರು ವಿಡಿಯೋ ಸಂವಾದದಲ್ಲಿ ಸೂಚನೆ ನೀಡಿದ್ದಾರೆ..
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಎಲ್ಲಾ ಶಾಸಕರು, ಸಿಇಒ, ಎಸ್ಪಿ ಸೇರಿ ಎಲ್ಲರ ಜೊತೆ ಚರ್ಚಿಸಿ ಅಂತಿಮವಾಗಿ ನಿರ್ಧರಿಸುತ್ತೇವೆ. ಪ್ರತಿಯೊಬ್ಬರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಬಳಿಕ ತೀರ್ಮಾನ ಪ್ರಕಟಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 81 ಕಂಟೇನ್ಮೆಂಟ್ ಝೋನ್ಗಳಿವೆ. ನಗರ ಪ್ರದೇಶಗಳಲ್ಲಿ 60, ಗ್ರಾಮೀಣ ಪ್ರದೇಶದಲ್ಲಿ 21 ಝೋನ್ಗಳಿವೆ. ಇಲ್ಲಿ ಮತ್ತಷ್ಟು ಬಿಗಿ ಕ್ರಮಕೈಗೊಳ್ಳುವಂತೆ ಸಿಎಂ ಯಡಿಯೂರಪ್ಪ ಅವರು ವಿಡಿಯೋ ಸಂವಾದದಲ್ಲಿ ಸೂಚನೆ ನೀಡಿದ್ದು, ಈ ಭಾಗದ ಪ್ರದೇಶಗಳಲ್ಲಿ ಹೊರಗೆ ಮತ್ತು ಒಳಗಡೆ ಬರುವವರ ಬಗ್ಗೆ ತೀವ್ರ ನಿಗಾವಹಿಸುತ್ತೇವೆ. ಸರ್ವೇಲೈನ್ಸ್ ಮತ್ತಷ್ಟು ಸಮರ್ಪಕವಾಗಿ ಹಾಗೂ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತೇವೆ ಎಂದು ತಿಳಿಸಿದರು.