ಕರ್ನಾಟಕ

karnataka

ETV Bharat / state

ಬೆಣ್ಣೆನಗರಿಗೆ ಆಮದಾಗ್ತಿಲ್ಲ ನಾಸಿಕ್‌ ಈರುಳ್ಳಿ.. ಮಾಡಿದ ತಪ್ಪನ್ನೇ ಮತ್ತೆ ಮಾಡಲ್ಲ ಅಂತಾರೆ ಜನ.. - Not importing nasik onions

ವಿವಿಧ ರಾಜ್ಯಗಳ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೆಳೆದ ಈರುಳ್ಳಿ ದಾವಣಗೆರೆಗೆ ಬರುತ್ತವೆ. ಜಿಲ್ಲಾಡಳಿತ ಆಹಾರ ಪದಾರ್ಥ ಈರುಳ್ಳಿ ಪೂರೈಕೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲವಾದರೂ ಮಹಾರಾಷ್ಟ್ರ ಭಾಗದಿಂದ ಈರುಳ್ಳಿ ಆಮದು ಬಂದ್ ಮಾಡಲಾಗಿದೆ..

ಮಹಾರಾಷ್ಟ್ರ ಮೂಲದ ಈರುಳ್ಳಿಗೆ ಗೇಟ್ ಪಾಸ್
ಮಹಾರಾಷ್ಟ್ರ ಮೂಲದ ಈರುಳ್ಳಿಗೆ ಗೇಟ್ ಪಾಸ್

By

Published : Apr 21, 2021, 7:47 PM IST

ದಾವಣಗೆರೆ :ಈ ಬಾರಿ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾಗಿದ್ದರಿಂದ ಅಲ್ಲಿನ ಸಾಂಗ್ಲಿ, ಪುಣೆ, ನಾಸಿಕ್​ನಿಂದ ಬರುವ ಈರುಳ್ಳಿ ಆಮದು ಮಾಡಿಕೊಳ್ಳವುದನ್ನು ಕಳೆದ ಎರಡು ತಿಂಗಳಿಂದ ನಿಲ್ಲಿಸಲಾಗಿದೆ.

ಕಳೆದ ವರ್ಷ ಮಹಾರಾಷ್ಟ್ರದ ನಾಸಿಕ್​ನಿಂದ ದಾವಣಗೆರೆಗೆ ಬಂದಿದ್ದ ಈರುಳ್ಳಿ ಲಾರಿ ಲೋಡ್​ನಿಂದಲೇ ಮಹಾಮಾರಿ ಕೊರೊನಾ ದಾವಣಗೆರೆ ನಗರಕ್ಕೆ ಪ್ರವೇಶ ಪಡೆದಿತ್ತು. ಈರುಳ್ಳಿ ಲೋಡ್​​ ತಂದಿದ್ದ ಲಾರಿ ಚಾಲಕನಲ್ಲಿ ಸೋಂಕು ಪತ್ತೆಯಾಗಿತ್ತು. ಆತ ಬಂದಿದ್ದ ಪ್ರದೇಶದಲ್ಲಿ 60ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ಇರುವುದು ಗೊತ್ತಾಗಿತ್ತು.

ಇದರಿಂದ ಈ ಬಾರಿ ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಾಗಿದ್ದರಿಂದ ಮಹಾರಾಷ್ಟ್ರದ ಸಾಂಗ್ಲಿ,ಪುಣೆ, ನಾಸೀಕ್‌ನಿಂದ ಈರುಳ್ಳಿ ಆಮದು ಮಾಡಿಕೊಳ್ಳುವುದನ್ನು ಕಳೆದ ಎರಡು ತಿಂಗಳಿನಿಂದ ನಿಲ್ಲಿಸಲಾಗಿದೆ.

ಮಹಾರಾಷ್ಟ್ರ ಮೂಲದ ಈರುಳ್ಳಿಗೆ ಗೇಟ್‌ಪಾಸ್..

ವಿವಿಧ ರಾಜ್ಯಗಳ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬೆಳೆದ ಈರುಳ್ಳಿ ದಾವಣಗೆರೆಗೆ ಬರುತ್ತವೆ. ಜಿಲ್ಲಾಡಳಿತ ಆಹಾರ ಪದಾರ್ಥ ಈರುಳ್ಳಿ ಪೂರೈಕೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲವಾದರೂ ಮಹಾರಾಷ್ಟ್ರ ಭಾಗದಿಂದ ಈರುಳ್ಳಿ ಆಮದು ಬಂದ್ ಮಾಡಲಾಗಿದೆ.

ಈಗಾಗಲೇ ಒಮ್ಮೆ ತಪ್ಪಾಗಿದೆ. ಇತಿಹಾಸದಿಂದ ಪಾಠ ಕಲಿಯಬೇಕು. ಆದ್ರೆ, ಪದೇಪದೆ ಅದೇ ತಪ್ಪು ಮಾಡುತ್ತಿದ್ದರೇ ಹೇಗೆ ಎಂದು ಜನ ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡುತ್ತಿದ್ದಾರೆ. ಮೇಲಾಗಿ ಇತ್ತೀಚಿಗೆ ಕೊರೊನಾ ಪರೀಕ್ಷೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಮತ್ತೆ ಈರುಳ್ಳಿ ಮೂಲಕ ಕೊರೊನಾ ಬೆಣ್ಣೆನಗರಿ ದಾವಣಗೆರೆ ಬಂದ್ರೆ ಹೇಗೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ABOUT THE AUTHOR

...view details