ಶಾಸಕರು ರಮೇಶ್ ಜಾರಕಿಹೊಳಿ ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಡಿ : ಸಚಿವ ಭೈರತಿ ಬಸವರಾಜ್ - Bhairati Basavaraj's statement on Ramesh Zarakihili visit
ನನ್ನ ಇಲಾಖೆಯ ಕಚೇರಿಯಲ್ಲಿ ಕೆಲಸ ಇದ್ದಾಗ ಶಾಸಕರು ಬರುತ್ತಾರೆ. ನಾನು ರಮೇಶ್ ಜಾರಕಿಹೊಳಿ ಅವರಲ್ಲಿ ಕೆಲಸ ಇದ್ದರೆ ಹೋಗಿರುತ್ತೇನೆ. ಪರ್ಯಾಯವಾಗಿ ಮತ್ತೇನೂ ನಡೆಯುತ್ತಿಲ್ಲ..
ಭೈರತಿ ಬಸವರಾಜ್
ದಾವಣಗೆರೆ :ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಶಾಸಕರು ಭೇಟಿ ಮಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ತಮ್ಮ ಕೆಲಸಗಳನ್ನು ಮಾಡಿಕೊಳ್ಳುವ ಸಲುವಾಗಿ ಹೋಗಿರುತ್ತಾರೆ. ಇದರಲ್ಲೇನೂ ರಾಜಕೀಯ ಚಟುವಟಿಕೆ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ನಾನು ಸಹ ಸಿಎಂ ಯಡಿಯೂರಪ್ಪ ಅವರಲ್ಲಿ ಒತ್ತಾಯ ಮಾಡಿದ್ದೇನೆ. ಜಿಲ್ಲೆಯ ಶಾಸಕರ ಅಭಿಪ್ರಾಯವೂ ಇದೇ ಆಗಿದೆ. ಮಧ್ಯಕರ್ನಾಟಕದ ಹೆಬ್ಬಾಗಿಲು ದಾವಣಗೆರೆಗೆ ಸಚಿವ ಸ್ಥಾನ ನೀಡಿದರೆ ಒಳ್ಳೆಯದು ಎಂದರು.