ಕರ್ನಾಟಕ

karnataka

ETV Bharat / state

ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ಅಗತ್ಯವಿಲ್ಲ: ಶಾಮನೂರು ಶಿವಶಂಕರಪ್ಪ - ದಾವಣಗೆರೆ

ಫೋನ್ ಕದ್ದಾಲಿಕೆ ಹಿಂದಿನಿಂದಲೂ ಎಲ್ಲಾ ಸರ್ಕಾರದಲ್ಲೂ ಆಗಿದೆ. ಇದೇನು ಹೊಸದಲ್ಲ. ಹಾಗಾಗಿ ತನಿಖೆಯ ಅವಶ್ಯಕತೆ ಇಲ್ಲವೆಂದು ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ

By

Published : Aug 18, 2019, 6:16 PM IST

ದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಫೋನ್ ಟ್ಯಾಪಿಂಗ್ ಪ್ರಕರಣದ ಬಗ್ಗೆ ಕಾಂಗ್ರೆಸ್​ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದಾರೆ.

ಫೋನ್ ಟ್ಯಾಪಿಂಗ್ ಪ್ರಕರಣ ತನಿಖೆ ಅಗತ್ಯವಿಲ್ಲ: ಶಾಮನೂರು ಶಿವಶಂಕರಪ್ಪ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫೋನ್ ಕದ್ದಾಲಿಕೆ ಹಿಂದಿನಿಂದ ಎಲ್ಲಾ ಸರ್ಕಾರಗಳಲ್ಲೂ ಆಗಿದೆ. ಅದನ್ನು ಯಾರಾದರೂ ಮಾಡಬಹುದು. ಇದೇನು ಹೊಸದಲ್ಲ ಎಂದಿದ್ದಾರೆ.

ಫೋನ್ ಕದ್ದಾಲಿಕೆ ಬಗ್ಗೆ ಕಾಂಗ್ರೆಸ್​ನವರು ಒಂದು ಹೇಳುತ್ತಾರೆ, ಜೆಡಿಎಸ್​ನವರು ಇನ್ನೊಂದು ಹೇಳುತ್ತಾರೆ. ಇತ್ತ ಬಿಜೆಪಿಯವರು ಮತ್ತೊಂದು ಹೇಳುತ್ತಾರೆ. ಹೀಗಾಗಿ ತನಿಖೆ ಮಾಡಿಸುವುದನ್ನು ಬಿಟ್ಟು, ಸುಮ್ಮನಿರುವುದೇ ಒಳ್ಳೆಯದು ಎಂದು ಶಾಮನೂರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details