ದಾವಣಗೆರೆ: ಕೊರೊನಾ ಪ್ರಕರಣ ಹೆಚ್ಚಳವಾದ ಕಾರಣ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿಲ್ಲ.
ಬೆಣ್ಣೆ ನಗರಿಯಲ್ಲಿ ನಿನ್ನೆ ಒಂದೇ ದಿನ 21 ಕೊರೊನಾ ಸೋಂಕಿತರ ಪ್ರಕರಣ ಪತ್ತೆಯಾಗಿದ್ದು ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನೀಡಿದ್ದ ಅನುಮತಿ ರದ್ದುಗೊಳಿಸಲಾಗಿದೆ. ನಗರ ಕೆಂಪು ವಲಯಕ್ಕೆ ಹತ್ತಿರವಾಗುತ್ತಿರುವ ಕಾರಣ ಎಣ್ಣೆ ಸಿಗದೆ ನಿರಾಸೆಗೊಂಡರು.