ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಪರಿಣಾಮ, ಬೆಡ್ಗಳ ಸಮಸ್ಯೆ ಕೂಡ ತಲೆದೋರಿದೆ. ಪ್ರತಿ ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದು, ಮಧ್ಯವರ್ತಿಗಳು ಹಸ್ತಕ್ಷೇಪ ಮಾಡದಂತೆ ಜಿಲ್ಲಾಡಳಿತ ನಿಗಾ ವಹಿಸಿದೆ.
ಸೋಂಕಿತರ ಜೀವ ಉಳಿಸಲು ಪ್ರಮುಖ ಪಾತ್ರವಹಿಸುವ ಆಕ್ಸಿಜನ್ ಬೆಡ್ ಹಾಗು ಐಸಿಯು ಸೇರಿದಂತೆ ರೆಮ್ಡಿಸಿವಿರ್ ಇಂಜೆಕ್ಷನ್ ಕಾಳಸಂತೆಯಲ್ಲಿ ಮಾರಾಟ ಆಗದಂತೆಯೂ ಕ್ರಮ ವಹಿಸಲಾಗಿದೆ. ಬೆಡ್ಗಳನ್ನು ಕೊಡಿಸುವ ಕೆಲಸ ನಡೆಯದಂತೆ ಜಿಲ್ಲಾಡಳಿತಕ್ಕೆ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ಸಾಫ್ಟ್‌ವೇರ್ ಜಾರಿಗೆ ತರಲಿದ್ದು, ಈ ಮೂಲಕವೇ ಬೆಡ್ ಪಡೆಯುವ ಸೌಕರ್ಯ ಕಲ್ಪಿಸಲಾಗುತ್ತದೆ. ಕೊರೊನಾ ಎರಡನೇ ಅಲೆ ಆರಂಭದಿಂದಲೂ ಈವರೆಗೂ ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪ ಕಂಡುಬಂದಿಲ್ಲ ಎಂದು ಡಿಹೆಚ್ಒ ಡಾ. ನಾಗರಾಜ್ ಹೇಳುತ್ತಾರೆ.