ಕರ್ನಾಟಕ

karnataka

ETV Bharat / state

ಬೆಳಕಿನ ಹಬ್ಬ ಆಚರಿಸಿದ್ರೆ ಈ ಗ್ರಾಮದಲ್ಲಾಗುತ್ತೆ ಕೆಡುಕು.. ದೀಪಾವಳಿಯಂದು ಕರಾಳ ದಿನ - ದೀಪಾವಳಿ ಆಚರಣೆ ಮಾಡಿದರೆ ಗ್ರಾಮದಲ್ಲಿ ಕೆಡುಕಾಗುತ್ತದೆ

ದಾವಣಗೆರೆಯ ಲೋಕಿಕೆರೆ ಎಂಬ ಗ್ರಾಮದಲ್ಲಿ ಕಳೆದ ಕೆಲವು ದಶಕಗಳಿಂದ ದೀಪಾವಳಿಯನ್ನು ಆಚರಿಸಿಲ್ಲ. ಒಂದು ವೇಳೆ ದೀಪಾವಳಿ ಆಚರಣೆ ಮಾಡಿದರೆ ಗ್ರಾಮದಲ್ಲಿ ಕೆಡುಕಾಗುತ್ತದೆ ಎಂದು ಗ್ರಾಮಸ್ಥರು ನಂಬಿದ್ದಾರೆ.

no-deepavali-celebration-in-davanagere
ಬೆಳಕಿನ ಹಬ್ಬ ಆಚರಿಸಿದ್ರೇ ಈ ಗ್ರಾಮದಲ್ಲಾಗುತ್ತೇ ಕೆಡುಕು, ದೀಪಾವಳಿ ಹಬ್ಬದಂದು ಕರಾಳ ದಿನ

By

Published : Oct 25, 2022, 4:28 PM IST

Updated : Oct 25, 2022, 4:45 PM IST

ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿಯನ್ನು ದೇಶದೆಲ್ಲೆಡೆ ಬಹು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹೊಸ ಉಡುಗೆ ತೊಟ್ಟು ಪಟಾಕಿ ಸಿಡಿಸಿ ಮನೆಮಂದಿಯೆಲ್ಲ ಒಟ್ಟಾಗಿ ದೀಪಾವಳಿಯನ್ನು ಆಚರಿಸುತ್ತಾರೆ. ಆದರೆ, ದಾವಣಗೆರೆ ತಾಲೂಕಿನ ಲೋಕಿಕೆರೆ ಗ್ರಾಮಸ್ಥರು ಮಾತ್ರ ದೀಪಾವಳಿ ಹಬ್ಬವನ್ನು ಆಚರಿಸುವುದಿಲ್ಲ.

ಹೌದು, ಕಳೆದ ಐದಾರು ದಶಕಗಳಿಂದ ಈ ಊರಿನ ಜನ ದೀಪಾವಳಿ ಹಬ್ಬವನ್ನೇ ಆಚರಿಸಿಲ್ಲ. ಅಲ್ಲದೆ ಈ ದಿನವನ್ನು ಕರಾಳ ದಿನವೆಂಬಂತೆ ನಂಬಿಕೊಂಡು ಬಂದಿದ್ದಾರೆ. ಈ ಪದ್ಧತಿ ತಲತಲಾಂತರಗಳಿಂದ ಹೀಗೆ ಮುಂದುವರಿದಿದೆ.

ಪರಿಶಿಷ್ಟ ಜಾತಿ ಹಾಗು ಕುರುಬರೇ ಹೆಚ್ಚಿರುವ ಈ ಲೋಕಿಕೆರೆ ಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡುವುದಿಲ್ಲ. ಕೆಲವರು ಗ್ರಾಮದ ಆಂಜನೇಯನ ತೇರಿನ ಸಮಯದಲ್ಲಿ, ಇನ್ನು, ಕೆಲವರು ವಿಜಯದಶಮಿಯಂದು ದೀಪಾವಳಿ ರೂಪದಲ್ಲಿ ಈ ಹಿರಿಯರ ಹಬ್ಬವನ್ನು ಆಚರಣೆ ಮಾಡುತ್ತಾರೆ. ಇದನ್ನು ಹೊರತುಪಡಿಸಿದರೆ ದೀಪಾವಳಿಯಂದು ಹಬ್ಬದ ಆಚರಿಸಿದರೆ, ಕೆಡಕಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ.

ದೀಪಾವಳಿ ಆಚರಿಸಿದರೆ ಕೆಡುಕಾಗುವುದು ಎಂಬ ನಂಬಿಕೆ : ಇನ್ನು, ಈ ದೀಪಾವಳಿ ಹಬ್ಬ ಆಚರಣೆ ಮಾಡದಿರುವ ಬಗ್ಗೆ ಕೇಳಿದರೆ, ಕೆಲ ವರ್ಷಗಳ ಹಿಂದೆ ಕೆಲ ಹಿರಿಯರು ದೀಪಾವಳಿ ಹಬ್ಬ ಆಚರಿಸಲು ಕಾಶಿ ಹುಲ್ಲು ತರಲು ತೆರಳಿದ್ದರು. ಬಳಿಕ ಅವರು ಮರಳಿಬಂದಿಲ್ಲ. ಗ್ರಾಮಸ್ಥರೆಲ್ಲ ಎಲ್ಲೆಡೆ ಹುಡುಕಿದರೂ ಅವರು ಪತ್ತೆಯಾಗಿಲ್ಲವಂತೆ. ನಂತರ ದಿನಗಳಲ್ಲಿ ಈ ಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಣೆ ಮಾಡಕೂಡದು ಎಂದು ಗ್ರಾಮದ ಹಿರಿಯರು ನಿರ್ಧಾರ ಮಾಡಿದ್ದು, ಒಂದು ವೇಳೆ ಗ್ರಾಮದಲ್ಲಿ ದೀಪಾವಳಿ ಹಬ್ಬ ಆಚರಿಸಿದರೆ ಕೆಡಕಾಗುತ್ತದೆ ಎಂದು ಜನ ನಂಬಿದ್ದಾರೆ ಎಂದು ಗ್ರಾಮಸ್ಥ ಮಂಜುನಾಥ್ ಹೇಳಿದ್ದಾರೆ.

ಬೆಳಕಿನ ಹಬ್ಬ ಆಚರಿಸಿದ್ರೆ ಈ ಗ್ರಾಮದಲ್ಲಾಗುತ್ತಂತೆ ಕೆಡುಕು..!

ಇನ್ನು, ಈ ಗ್ರಾಮದಲ್ಲಿ ಕೆಲವರು ಹಬ್ಬ ಆಚರಣೆ ಮಾಡಲು ಮುಂದಾದ ಬೆನ್ನಲ್ಲೇ ಕೆಡುಕಾಗಿರುವ ಉದಾಹರಣೆಗಳಿವೆಯಂತೆ. ಬೆಳಕಿನ ಹಬ್ಬವನ್ನು ಆಚರಣೆ ಮಾಡಬೇಕೆಂದು ಗ್ರಾಮದ ಯುವಕರು ಹಿರಿಯ ಮುಖಂಡರ ಸಭೆ ಕರೆದು ಚರ್ಚೆ ನಡೆಸಿದರೂ ಹಬ್ಬ ಆಚರಣೆಗೆ ಹಿರಿಯರು ಒಪ್ಪಿಗೆ ನೀಡಿಲ್ಲವಂತೆ. ಒಟ್ಟಾರೆ ಹಿಂದುಗಳ ಬಹುದೊಡ್ಡ ಹಬ್ಬ ದೀಪಾವಳಿ ಆಚರಣೆ ಮಾಡುವುದೇ ಒಂದು ದೊಡ್ಡ ಸಂತಸ. ಆದರೆ ದಶಕಗಳಿಂದ ಲೋಕಿಕೆರೆ ಗ್ರಾಮದ ಗ್ರಾಮಸ್ಥರು ದೀಪಾವಳಿ ಹಬ್ಬವನ್ನು ಆಚರಿಸದಿರುವುದು ಅಚ್ಚರಿಯ ಸಂಗತಿಯಾಗಿದೆ.

ಇದನ್ನೂ ಓದಿ :ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರೆ.. ಹಾಲರವಿ ಉತ್ಸವದಲ್ಲಿ ಜನಸಾಗರ

Last Updated : Oct 25, 2022, 4:45 PM IST

ABOUT THE AUTHOR

...view details