ದಾವಣಗೆರೆ: ಜಿಲ್ಲಾ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಸಂಪೂರ್ಣವಾಗಿ ಗುಣಮುಖರಾದ ನಾಲ್ವರು ಸೋಂಕಿತರನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ 50 ಮಂದಿ ಡಿಸ್ಚಾರ್ಜ್ ಆದಂತಾಗಿದೆ.
ನಿಟ್ಟುಸಿರು ಬಿಟ್ಟ ದಾವಣಗೆರೆಯಲ್ಲಿ ಇಂದು ನೋ ಪಾಸಿಟಿವ್... ನಾಲ್ವರು ಡಿಸ್ಚಾರ್ಜ್ - Corona Infected Discharge
ದಾವಣಗೆರೆಯಲ್ಲಿ ಇಂದು ಒಂದೂ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿಲ್ಲ. ಬದಲಿಗೆ ಇಲ್ಲಿನ ಕೋವಿಡ್-19 ಜಿಲ್ಲಾಸ್ಪತ್ರೆಯಿಂದ ನಾಲ್ವರು ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇವರಿಗೆ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟಿದ್ದಾರೆ.
ದಾವಣಗೆರೆಯಲ್ಲಿಂದು ನೋ ಕೊರೊನಾ ಪಾಸಿಟಿವ್: ಜಿಲ್ಲಾಸ್ಪತ್ರೆಯಿಂದ ನಾಲ್ವರು ಡಿಸ್ಚಾರ್ಜ್
ಬಿಡುಗಡೆ ಹೊಂದಿದ ನಾಲ್ವರಿಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡುಗೆ ನೀಡಿದರು. ರೋಗಿಗಳಾದ ಪಿ- 630, 631, 668 ಮತ್ತು 755 ಇವರು ಸಂಪೂರ್ಣ ಗುಣಮುಖರಾಗಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಇದುವರೆಗೆ ಜಿಲ್ಲೆಯಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 71 ಆಗಿದ್ದು, ಸೋಮವಾರ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಡದೇ ಇರುವುದು ಜನರಲ್ಲಿ ನೆಮ್ಮದಿ ತರಿಸಿದೆ.