ಕರ್ನಾಟಕ

karnataka

ETV Bharat / state

ಕುರುಬ ಸಮುದಾಯದ ಎಸ್‌ಟಿ ಮೀಸಲಾತಿಗಾಗಿ ಸಿಎಂ ಕೇಂದ್ರಕ್ಕೆ ಶಿಫಾರಸು ಮಾಡಬೇಕು.. ಕಾಗಿನೆಲೆ ಶ್ರೀಗಳು - davanagere latest news

ಬಿ ಎಸ್ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅವರನ್ನು ಕುರುಬ ಸಮುದಾಯ ಯಾವತ್ತೂ ಮರೆಯಬಾರದು. ಬಿಎಸ್​​ವೈ ಸರ್ಕಾರ ಮಠಕ್ಕೆ 10 ಕೋಟಿ ರೂ. ಕೊಟ್ಟಿದೆ. ಬರಡಾಗಿದ್ದ ಬೆಳ್ಳೂಡಿ ಭೂಮಿ ಇದೀಗ ನಂದನವನ ಆಗಿದೆ..

niranjananadapuri shri
ನಿರಂಜನಾನಂದಪುರಿ ಶ್ರೀ

By

Published : Apr 4, 2021, 11:04 PM IST

ನಿರಂಜನಾನಂದಪುರಿ ಶ್ರೀ

ದಾವಣಗೆರೆ: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಲು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಪಾದಯಾತ್ರೆ ಮೂಲಕ ಮನವಿ ಮಾಡಿದ ನಾವು ಸರ್ಕಾರದ ತೀರ್ಮಾನಕ್ಕೆ ಕಾಯುತ್ತಿದ್ದೇವೆ ಎಂದು ಕಾಗಿನೆಲೆ ಮಹಾಸಂಸ್ಥಾನದ ನಿರಂಜನಾನಂದಪುರಿ ಶ್ರೀ ಹೇಳಿದರು.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಕಾಗಿನೆಲೆ ಶಾಖಾ ಮಠದಲ್ಲಿ ಮಾತನಾಡಿದ ಅವರು, ನೀವು ಕುಲ ಶಾಸ್ತ್ರೀಯ ಅಧ್ಯಯನ ಮಾಡಿಸುತ್ತೀರೋ ಅಥವಾ ಹಾಗೆಯೇ ಶಿಫಾರಸು ಮಾಡುತ್ತೀರೋ ಎಂಬುದನ್ನು ಸಮುದಾಯಕ್ಕೆ ತಿಳಿಸಿ ಎಂದರು.

ಕಾಗಿನೆಲೆ ಮಹಾಸಂಸ್ಥಾನದ ಹೊಸದುರ್ಗ ಪೀಠದಲ್ಲಿ ಕನಕ ಪುತ್ಥಳಿ ನಿರ್ಮಾಣಕ್ಕೆ ಅನುದಾನ ನೀಡಿ, ಆ ಶಾಖಾ ಮಠದಲ್ಲಿ ಕನಕದಾಸರ ಏಕಶಿಲಾ ಮೂರ್ತಿ ನಿರ್ಮಿಸಬೇಕಾಗಿದೆ. ಇನ್ನು, ರಾಯಣ್ಣ ಪ್ರಾಧಿಕಾರಕ್ಕೆ ಬಾಕಿ ಇರುವ ಅನುದಾನ ಬಿಡುಗಡೆ ಮಾಡಬೇಕು. ಉಪಚುನಾವಣೆ ಮುಗಿದ ನಂತರ ಎಸ್ಟಿ ಮೀಸಲಾತಿ ಹೋರಾಟ ಸಮಿತಿ ಸಭೆ ಕರೆದು ನಿರ್ಣಯ ಕೈಗೊಳ್ಳಬೇಕೆಂದು ಸಿಎಂ ಬಿಎಸ್​​ವೈಗೆ ಮನವಿ ಮಾಡಿದರು.‌

ಇದನ್ನೂ ಓದಿ:ಸರ್ಕಾರಿ ದುಡ್ಡು ಯಾರಪ್ಪನ ಮನೆ ದುಡ್ಡಲ್ಲ ಅಂದ್ರೆ ಅದು ಬೈದಂಗಾ: ಸಿದ್ದರಾಮಯ್ಯ ಪ್ರಶ್ನೆ

ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅವರನ್ನು ಕುರುಬ ಸಮುದಾಯ ಯಾವತ್ತೂ ಮರೆಯಬಾರದು. ಬಿಎಸ್​​ವೈ ಸರ್ಕಾರ ಮಠಕ್ಕೆ 10 ಕೋಟಿ ರೂ. ಕೊಟ್ಟಿದೆ. ಬರಡಾಗಿದ್ದ ಬೆಳ್ಳೂಡಿ ಭೂಮಿ ಇದೀಗ ನಂದನವನ ಆಗಿದೆ ಎಂದರು.

ABOUT THE AUTHOR

...view details