ದಾವಣಗೆರೆ: ಎನ್ಐಎ ಅಧಿಕಾರಿಗಳು ದಾವಣಗೆರೆ ಹಾಗೂ ಹರಿಹರದಲ್ಲಿ ದಾಳಿ ಮಾಡಿದ್ದು, ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ. ದಾವಣಗೆರೆಯ ಎಂಸಿಸಿಬಿ ಬ್ಲಾಕ್ನಲ್ಲಿರುವ ಪಿಎಫ್ಐ ಮುಖಂಡ ಇಮಾಮುದ್ದಿನ್ ವಿಚಾರಣೆ ನಡೆಸಿ, ರಾತ್ರಿ ಮೂರು ಗಂಟೆ ಸುಮಾರಿಗೆ ಆತನನ್ನು ವಶಕ್ಕೆ ಪಡೆದಿದೆ. ಎನ್ಐಎ ತಂಡ ವಿಚಾರಣೆ ನಡೆಸುತ್ತಿದೆ.
ದಾವಣಗೆರೆ, ಹರಿಹರದಲ್ಲೂ ಎನ್ಐಎ ದಾಳಿ: ಇಬ್ಬರ ವಿಚಾರಣೆ - ಎನ್ಐಎ ದಾಳಿ
ರಾಷ್ಟ್ರೀಯ ತನಿಖಾ ದಳವು ದಾವಣಗೆರೆ ಮತ್ತು ಹರಿಹರದಲ್ಲಿ ಪಿಎಫ್ಐ ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ಇಬ್ಬರ ವಿಚಾರಣೆ ಮಾಡಿದ್ದಾರೆ.
ದಾವಣಗೆರೆ, ಹರಿಹರದಲ್ಲೂ ಎನ್ಐಎ ದಾಳಿ
ಅಷ್ಟೇ ಅಲ್ಲದೇ, ನೆರೆಯ ಹರಿಹರ ತಾಲೂಕಿನ ಅಬು ತಾಹೀರ್ ಎಂಬಾತನ ವಿಚಾರಣೆಯನ್ನು, ದಾವಣಗೆರೆಯ ಕೆಟಿಜೆ ನಗರದಲ್ಲಿ ನಡೆಸಲಾಗುತ್ತಿದೆ. ಅಬು ತಾಹೀರ್ ಎಸ್ಡಿಪಿಐ, ಪಿಎಫ್ಐ ಜೊತೆ ಲಿಂಕ್ ಹೊಂದಿರುವ ಹಿನ್ನೆಲೆ ವಿಚಾರಣೆ ನಡೆಸಲಾಗಿದೆ ಎನ್ನಲಾಗ್ತಿದೆ. ಇನ್ನು ಅಬು ತಾಹೀರ್ನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೋ, ಇಲ್ಲವೋ ಎಂಬ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ:ಮಂಗಳೂರಿನಲ್ಲಿ ಎನ್ಐಎ ಪರಿಶೀಲನೆ ಮುಕ್ತಾಯ: ಮೂವರು ಪಿಎಫ್ಐ ಮುಖಂಡರು ವಶಕ್ಕೆ
Last Updated : Sep 22, 2022, 2:48 PM IST