ಕರ್ನಾಟಕ

karnataka

ETV Bharat / state

ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ ಹೊಸ-ಹೊಸ ವಾಹನಗಳು.. ಬಳಸದ ಬಗ್ಗೆ ಹೇಳುತ್ತಿರುವ ಕಾರಣಗಳೇನು ಗೊತ್ತಾ? - ಎಲೆಕ್ಟ್ರಿಕ್ ಆಟೋಗಳ ಬಳಕೆಯೂ ಇಲ್ಲ

ದಾವಣಗೆರೆ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ತರಿಸಿಕೊಂಡು ಲಕ್ಷಾಂತರ ಮೌಲ್ಯದ ವಾಹನಗಳು ಹಾಗೂ ವಸ್ತುಗಳು ತುಕ್ಕು ಮತ್ತು ಧೂಳು ಹಿಡಿಯುಂತೆ ಆಗಿದೆ. ಜನರ ತೆರಿಗೆ ಹಣದಲ್ಲಿ ತಂದಿರುವ ಈ ವಾಹನಗಳ ಬಗ್ಗೆ ಪಾಲಿಕೆ ಅಧಿಕಾರಿಗಳು ಗಮನಹರಿಸಬೇಕಿದೆ.

new-vehicles-not-using-and-getting-rust-in-davanagere
ದಾವಣಗೆರೆ ಪಾಲಿಕೆಯಲ್ಲಿ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ ಹೊಸ-ಹೊಸ ವಾಹನಗಳು

By

Published : Jul 2, 2022, 10:07 PM IST

ದಾವಣಗೆರೆ: ಇಲ್ಲಿನ ಮಹಾನಗರ ಪಾಲಿಕೆಗೆ ಬೇಕಾದ ವಸ್ತುಗಳನ್ನು ಅಧಿಕಾರಿಗಳ ವರ್ಗ ಕೇಳಿದಂತೆಲ್ಲ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಮಂಜೂರು ಮಾಡುತ್ತೆ. ಆದರೆ, ಅದನ್ನು ಉಳಿಸುವ ಕೆಲಸವನ್ನು ಅಧಿಕಾರಿಗಳು ಮಾತ್ರ ಮಾಡುತ್ತಿಲ್ಲ. ನಿಂತ ಸ್ಥಳದಲ್ಲೇ ವಾಹನಗಳು ನಿಂತಿದ್ದರಿಂದ ತುಕ್ಕು ಹಿಡಿಯುತ್ತಿವೆ. ಡಸ್ಟ್ ಬಿನ್​ಗಳು, ತಳ್ಳುವ ಗಾಡಿಗಳು, ಎಲೆಕ್ಟ್ರಿಕ್ ಕಸದ ಆಟೋಗಳು ನಿಂತ ಜಾಗದಲ್ಲೇ ನಿಂತಿದ್ದರಿಂದ ಜನರ ತೆರಿಗೆ ಹಣದಲ್ಲಿ ಖರೀದಿಸಿರುವ ವಾಹನಗಳು ಹಾಳಾಗುತ್ತಿವೆ.

ಹೌದು, ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಿಗಳು ಜನರ ತೆರಿಗೆ ಹಣದಲ್ಲಿ ಸಾಕಷ್ಟು ವಾಹನಗಳನ್ನು ಖರೀದಿ ಮಾಡಿದ್ದಾರೆ. ಆದರೆ, ಪಾಲಿಕೆ ಆವರಣದಲ್ಲಿ ಹೊಸ-ಹೊಸ ವಾಹನಗಳು ಕೆಲಸ ಇಲ್ಲದೆ ನಿಂತಿದ್ದರಿಂದ ಪಾಲಿಕೆ ಸದಸ್ಯರು ಹಾಗೂ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಮಿಕಲ್​ ಇಲ್ಲದ ಸಬೂಬು:ನಾಲ್ಕು ಜಟ್ಟಿಂಗ್ ಸ್ಪ್ರೈ ಮಷಿನ್​ ಗಾಡಿಗಳಿದ್ದು, ಅವುಗಳನ್ನು ಉಪಯೋಗ ಮಾಡದೆ ಇರುವುದರಿಂದ ಕೆಟ್ಟು ನಿಂತಿವೆ. ಡೆಂಗ್ಯೂ ಸೊಳ್ಳೆಗಳನ್ನು ಹೋಗಲಾಡಿಸಲು ಈ ಯಂತ್ರವನ್ನು ಉಪಯೋಸಲಾಗುತ್ತದೆ. ಆದರೆ, ಜಟ್ಟಿಂಗ್ ಸ್ಪ್ರೈ ಯಂತ್ರಕ್ಕೆ ಬಳಸುವ ಕೆಮಿಕಲ್​ ಇಲ್ಲದ ಸಬೂಬು ಹೇಳಿ ವಾಹನವನ್ನು ಬಳಸದೇ ಹಾಗೆ ನಿಲ್ಲಿಸಲಾಗಿದೆ.

ದಾವಣಗೆರೆ ಪಾಲಿಕೆಯಲ್ಲಿ ನಿಂತಲ್ಲೇ ನಿಂತು ತುಕ್ಕು ಹಿಡಿಯುತ್ತಿವೆ ಹೊಸ-ಹೊಸ ವಾಹನಗಳು

ಎಲೆಕ್ಟ್ರಿಕ್ ಆಟೋಗಳ ಬಳಕೆಯೂ ಇಲ್ಲ:ಹಸಿ ಕಸ ಹಾಗು ಒಣ ಕಸವನ್ನು ಶೇಖರಿಸಲು ಅವಶ್ಯಕವಾಗಿರುವ 150 ಡಸ್ಟ್ ಬಿನ್​ಗಳನ್ನೂ ಪಾಲಿಕೆ ಅಧಿಕಾರಿಗಳು ತರಿಸಿದ್ದು, ಅವುಗಳು ಸಹ ಉಪಯೋಗಿಸದೆ ತುಕ್ಕು ಹಿಡಿದು ಮೂಲೆ ಸೇರಿವೆ. ಜೊತೆಗೆ 13 ಎಲೆಕ್ಟ್ರಿಕ್ ಕಸ ಶೇಖರಣೆ ಮಾಡುವ ಆಟೋಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಖರೀದಿ ಮಾಡಲಾಗಿದೆ. ಅವುಗಳನ್ನು ಕೂಡ ಬಳಕೆ ಮಾಡದೇ ಇದ್ದುದರಿಂದ ನಿಂತ ಜಾಗದಲ್ಲೇ ನಿಂತು ಹಾಳಾಗುವ ಪರಿಸ್ಥಿತಿ ಇದೆ.

ಇದ್ದು ಇಲ್ಲದಂತಿರುವ ಹಿಟಾಚಿ: ಪಾಲಿಕೆ ಆವರಣದಲ್ಲೇ ಸಣ್ಣ ಹಿಟಾಚಿಗಳು ಕೂಡ ಇವೆ. ಆದರೆ, ಅವುಗಳ ಬಳಕೆಯೇ ಮರೀಚಿಕೆಯಾಗಿದೆ. ಕಸ ಶೇಖರಿಸಲು 150ಕ್ಕೂ ಹೆಚ್ಚು ತಳ್ಳುವ ಗಾಡಿಗಳು ತಂದು ಹಾಗೆ ನಿಲ್ಲಿಸಲಾಗಿದೆ. ಇಷ್ಟೆಲ್ಲ ವಸ್ತುಗಳು ಪಾಲಿಕೆಗೆ ಬಂದಿದ್ದರೂ ಇವುಗಳ ಬಗ್ಗೆ ಪಾಲಿಕೆ ಸದಸ್ಯರಿಗೂ ಅಧಿಕಾರಿಗಳು ಮಾಹಿತಿ ನೀಡಿಲ್ಲ. ನೂತನ ಮುಕ್ತಿ ವಾಹನ ಕೂಡ ಚಾಲನೆ ದೊರೆಯದೆ ಹಾಗೆ ನಿಂತಿದೆ.

ಆಯುಕ್ತರ ಸಿದ್ಧ ಉತ್ತರ:ಹೀಗೆ ಜನರ ತೆರಿಗೆ ಹಣದಲ್ಲಿ ಲಕ್ಷಾಂತರ ರೂಪಾಯಿಯ ವಾಹನಗಳನ್ನು ಅಧಿಕಾರಿಗಳು ಬಳಕೆಗೆ ಕ್ರಮ ವಹಿಸದೇ ಬಿಟ್ಟಿರುವುದರ ಬಗ್ಗೆ ಪಾಲಿಕೆಯ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಹಾಗೂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಲಿಕೆ ಬೇಕಾದ ವಾಹನಗಳನ್ನು ತರಿಸಿ ಹೀಗೆ ಬೇಕಾಬಿಟ್ಟಿ ನಿಲ್ಲಿಸಿರುವುದರ ಬಗ್ಗೆ ಕೇಳಿದರೆ, ಪಾಲಿಕೆ ಆಯುಕ್ತರು ವಾಹನಗಳು ನೊಂದಣಿಯಾಗಿಲ್ಲ ಎಂಬ ಸಿದ್ಧ ಉತ್ತರವನ್ನು ನೀಡುತ್ತಿದ್ದಾರೆ ಎಂದು ಸದಸ್ಯರೇ ಆರೋಪಿಸಿದ್ದಾರೆ.

ಇದನ್ನೂ ಓದಿ:ದಾವಣಗೆರೆ: ಒಂದೇ ಮನೆಗೆ ಎರಡು ಬಾರಿ ನುಗ್ಗಿ ನಾಯಿ ಹೊತ್ತೊಯ್ದ ಚಿರತೆ - ವಿಡಿಯೋ

ABOUT THE AUTHOR

...view details