ದಾವಣಗೆರೆ: ಲೋಕಸಭೆ ಚುನಾವಣೆಗೆ ದಾವಣಗೆರೆ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ಏಪ್ರಿಲ್ 4 ರವೆರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಜಿ ಎನ್ ಶಿವಮೂರ್ತಿ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಬರುವಾಗ ಚುನಾವಣಾಧಿಕಾರಿ ಕಚೇರಿಯ 100 ಮೀಟರ್ ವ್ಯಾಪ್ತಿಯೊಳಗೆ ಮೂರು ವಾಹನಗಳನ್ನು ಮಾತ್ರ ತರಬಹುದಾಗಿದೆ. ಅಭ್ಯರ್ಥಿ ಸೇರಿ ಐದು ಮಂದಿ ಮಾತ್ರ ಪ್ರವೇಶಿಸಬಹುದು. ಒಬ್ಬ ಅಭ್ಯರ್ಥಿ ನಾಲ್ಕು ನಾಮಪತ್ರ ಸಲ್ಲಿಸಲು ಅವಕಾಶ ಇದೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮತದಾನದ ಬಗ್ಗೆ ಸಲಹೆ ಅಥವಾ ದೂರು ನೀಡಲು 1950 ನಂಬರಿಗೆ ಸಂಪರ್ಕಿಸಬಹುದಾಗಿದೆ. ಇನ್ನೂ ಚುನಾವಣಾ ಆಯೋಗ ಸಿವಿಜಿಲ್ ಎಂಬ ಹೊಸ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಮತದಾನ ಮಾಡಲು ಆಮಿಷ ಲಂಚ ಇನ್ನಿತರೆ ಅಕ್ರಮ ನಡೆದರೆ ಸಾರ್ವಜನಿಕರು ಪೋಟೊ ಅಥವಾ ವಿಡಿಯೊ ತೆಗೆದು ಕಳಿಸಬಹುದು. ಈ ಹಿನ್ನಲೆ 17 ಪ್ರಕರಣಗಳು ಬಂದಿದ್ದು, ಅದರಲ್ಲಿ 16 ಪ್ರಕರಣಗಳು ಯುವಕರು ಪರೀಕ್ಷಾರ್ಥ ವಿಡಿಯೊ ಮಾಡಿ ಕಳುಹಿಸಿದ್ದಾರೆ.
ಪತ್ತೆಯಾದ ಅಕ್ರಮ ಮದ್ಯ, ಕಾಂಚಾಣ: