ದಾವಣಗೆರೆ: ಈ ಖದೀಮರು ಮಾಡುವುದೇ ವಂಚನೆ. ಇಂತಹ ವಂಚನೆ ಸಹಕಾರ ನೀಡಲು ಅಕ್ಕಪಕ್ಕದ ರಾಜ್ಯದಲ್ಲಿ ಒಂದಿಷ್ಟು ಜನ ಆ್ಯಕ್ಟಿವ್ ಆಗಿದ್ದಾರೆ. ಅಂದ್ರೆ ವಂಚನೆ ಕೆಲಸ ಮಾಡುವರಿಗೆಲ್ಲರಿಗೂ ಮಾಸಿಕ ಮೂವತ್ತು ಸಾವಿರ ಸಂಬಳ ಕೂಡ ನಿಗದಿಯಾಗಿದೆ. ಆಯಾ ಮಾತೃ ಭಾಷೆಯಲ್ಲಿ ಮಾತನಾಡಿ ಅವರನ್ನ ವಂಚನೆ ಜಾಲಕ್ಕೆ ಬೀಳಿಸುವುದೇ ಇವರ ಕೆಲ್ಸ. ನಕಲಿ ಗೋಲ್ಡ್ ಗ್ಯಾಂಗ್ನ ವಿಶಿಷ್ಟವಾದ ಹೊಸ ಮಾಸ್ಟರ್ ಪ್ಲಾನ್ ಇದು.
ಎಲ್ಲಿ ತನಕ ಮೋಸ ಹೋಗುವವರು ಇರುತ್ತಾರೆಯೋ ಅಲ್ಲಿಯ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಇದಕ್ಕೆ ಇನ್ನೊಂದು ಹೆಸರೇ ನಕಲಿ ಗೋಲ್ಡ್ ದಂಧೆ. ಸುಮ್ನೆ ಒಂದು ಶಾಂಪಲ್ ಕೊಟ್ಟು ವಂಚನೆ ಖೆಡ್ಡಾಕ್ಕೆ ಬೀಳಿಸುವ ಈ ಗ್ಯಾಂಗ್ ಸಕ್ರಿಯವಾಗಿದೆ. ತಮಿಳುನಾಡಿನಲ್ಲಿ 34, ಕೇರಳದಲ್ಲಿ 18 ಆಂಧ್ರ ಪ್ರದೇಶದಲ್ಲಿ 63 ಹಾಗೂ ಕರ್ನಾಟಕದಲ್ಲಿ 108 ಪ್ರಕರಣಗಳು ( ದಾವಣಗೆರೆಯಲ್ಲಿ 55-60 ಕೇಸ್ ದಾಖಲಾಗಿದೆ) ಸೇರಿ ಒಟ್ಟು 213 ಪ್ರಕರಣಗಳು ದಾವಣಗೆರೆ ಜಿಲ್ಲಾ ಪೊಲೀಸ್ ರೆಕಾರ್ಡ್ ನಲ್ಲಿವೆ.
ಇದಕ್ಕೆ ಹೊಸ ಸೇರ್ಪಡೆ ಅಂದ್ರೆ ಹೀಗೆ ನಕಲಿ ಚಿನ್ನ ನೀಡಿ ವಂಚನೆ ಮಾಡುವ ವ್ಯಕ್ತಿಗಳು ಈಗ ಕರ್ನಾಟಕವನ್ನ ಬಿಟ್ಟು ಬಿಟ್ಟಿದ್ದಾರೆ. ಕೇವಲ ಹೊರ ರಾಜ್ಯಗಳ ಮೇಲೆ ಕಣ್ಣಾಕ್ಕಿದ್ದಾರೆ. ಕಾರಣ ಇವರ ವಂಚನೆ ಜಾಲಕ್ಕೆ ಹೆಚ್ಚಾಗಿ ತಮಿಳುನಾಡು, ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹೊರ ರಾಜ್ಯದ ನೂರಾರು ಜನ ಚಿನ್ನದ ಆಸೆಗೆ ಬಿದ್ದು ಲಕ್ಷಾಂತರ ಹಣ ವಂಚಕರ ಕೈಗೆ ಕೊಟ್ಟು ಕೈ ಸುಟ್ಟುಕೊಳ್ಳುತ್ತಿದ್ದಾರೆ.
ಐದರಿಂದ ಹತ್ತು ಲಕ್ಷ ರೂಪಾಯಿ ವಂಚನೆ: 'ನಮ್ಮ ಮನೆ ಪಾಯಾ ತೆಗೆಯುವಾಗ ನಿಧಿ ಸಿಕ್ಕಿದೆ ಎಂದು ಮೊದಲು ಅಸಲಿ ಚಿನ್ನ ಕೊಟ್ಟು, ನಂತರ ಕುಂಕುಮದಲ್ಲಿ ನಕಲಿ ಚಿನ್ನ ಹಾಕಿ ವಂಚಿಸುತ್ತಾರೆ. ಮನೆಗೆ ಹೋಗಿ ನೋಡಿದರೆ ಎಲ್ಲ ನಕಲಿ ಚಿನ್ನದ ನಾಣ್ಯಗಳು. ಕನಿಷ್ಠ ಐದರಿಂದ ಹತ್ತು ಲಕ್ಷ ರೂಪಾಯಿ ವಂಚನೆ ಮಾಡುವುದು ಇವರ ಕೆಲ್ಸ ಎನ್ನುತ್ತಾರೆ' ಎಸ್ಪಿ ಸಿಬಿ ರಿಷ್ಯಂತ್.
ಕಾಲ್ ಮಾಡಿ ಮೋಸ ಮಾಡುವ ಜಾಲ:ಒಂದು ಸ್ಮಾಲ್ ಗ್ಯಾಂಗ್ ಚನ್ನಗಿರಿಯಲ್ಲಿ ಆಕ್ಟೀವ್ ಆಗಿದೆ. ಹೆಚ್ಚಾಗಿ ಹರಪ್ಪನಹಳ್ಳಿಯಲ್ಲಿ ಒಂದು ಲೊಕಲಿಟಿ ಕಂಪ್ಲೀಟ್ ಇದೇ ಕೆಲಸ ಮಾಡುತ್ತಿರುವುದು ಕಂಡುಬಂದಿದೆ. ಈಗಾಗಲೇ ಎಲ್ಲ ಕೇಸ್ಗಳನ್ನು ಟ್ರೇಸ್ ಹಾಕಿ ರಿಕವರಿ ಕೂಡಾ ಮಾಡಲಾಗಿದೆ. 90 ಪರ್ಸೆಂಟ್ ಕೇಸ್ ರಿಕವರಿ ಆಗಿದೆ. ಇತ್ತೀಚಿಗೆ ನಿಧಿ ಸಿಕ್ಕಿದೆ ಅಂತ ಕಾಲ್ ಮಾಡಿ ಮೋಸ ಮಾಡುವ ಜಾಲ ಬೆಳೆಯುತ್ತಿದೆ.