ಕರ್ನಾಟಕ

karnataka

ETV Bharat / state

ಪ್ರೀತಿಸಿ ಮದುವೆಯಾಗಿ ಬೇರೆ ಬೇರೆಯಾಗಿದ್ದ ಜೋಡಿ, ಮತ್ತೆ ಒಂದಾಗಿ ಪೊಲೀಸ್ ರಕ್ಷಣೆ ಕೋರಿದ್ದೇಕೆ...? - Davangere news

ಪ್ರೀತಿಸಿ ಮದುವೆಯಾದ ಜೋಡಿ ಜೀವ ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿರುವ ಘಟನೆ ಹರಿಹರದಲ್ಲಿ ನಡೆದಿದೆ.

New married couple
ಪ್ರೀತಿಸಿ ಮದುವೆಯಾಗಿ ಬೇರೆ ಬೇರೆಯಾಗಿದ ಜೋಡಿ, ಮತ್ತೆ ಒಂದಾಗಿರುವ ಪೊಲೀಸ್ ರಕ್ಷಣೆ ಕೋರಿದ್ದೇಕೆ...?

By

Published : Jan 3, 2020, 5:05 PM IST

Updated : Jan 3, 2020, 5:24 PM IST

ದಾವಣಗೆರೆ:ಪ್ರೀತಿಸಿ ಮದುವೆಯಾದ ಜೋಡಿಯೊಂದು ಜೀವ ಬೆದರಿಕೆ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದೆ.

ಪ್ರೀತಿಸಿ ಮದುವೆಯಾಗಿ ಬೇರೆ ಬೇರೆಯಾಗಿದ ಜೋಡಿ, ಮತ್ತೆ ಒಂದಾಗಿರುವ ಪೊಲೀಸ್ ರಕ್ಷಣೆ ಕೋರಿದ್ದೇಕೆ...?

ಜಿಲ್ಲೆಯ ಹರಿಹರ ಪಟ್ಟಣದ ಪವಿತ್ರ ಹಾಗೂ ಹರಪ್ಪನಹಳ್ಳಿ ತಾಲೂಕಿನ ಖಂಡೇಕೆರೆ ಗ್ರಾಮದ ಯುವಕ ಕೊಟ್ರೇಶ್ ಪೋಷಕರ ಬೆದರಿಕೆ ಹಿನ್ನೆಲೆಯಲ್ಲಿ ಪೊಲೀಸರ ಮೊರೆ ಹೋಗಿದ್ದಾರೆ.

ಘಟನೆ ಹಿನ್ನೆಲೆ ಏನು...?

ಕಳೆದ ಎರಡು ವರ್ಷಗಳ ಹಿಂದೆ ಪವಿತ್ರ ಹಾಗೂ ಕೊಟ್ರೇಶ್ ನಡುವೆ ಪ್ರೇಮಾಂಕುರ ಆಗಿತ್ತು. ಹರಿಹರ ಪಟ್ಟಣದಲ್ಲಿ ಪವಿತ್ರ ಮನೆ ಎದುರು ಜೆಸಿಬಿ ಚಾಲಕನಾಗಿದ್ದ ಕೊಟ್ರೇಶ್ ಅಲ್ಲೆ ರೂಂ ಬಾಡಿಗೆ ಮಾಡಿಕೊಂಡಿದ್ದ. ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಮಗಳಾದ ಪವಿತ್ರ ಹಾಗೂ ಕೊಟ್ರೇಶ್ ಪ್ರೀತಿ ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಹೆಚ್ಚಾಯ್ತು. ಆದ್ರೆ ಇವರ ಮದುವೆಗೆ ಪಾಲಕರ ವಿರೋಧ ಇತ್ತು.

ಡಿಸೆಂಬರ್ 21 ರಂದು ಬೆಂಗಳೂರಿಗೆ ಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು ಈ ಜೋಡಿ. ಬೆಂಗಳೂರಿನಲ್ಲಿರುವ ಮಾಹಿತಿ ಗೊತ್ತಾದ ಪವಿತ್ರ ಪೋಷಕರು, ಇಬ್ಬರು ಪ್ರೇಮಿಗಳನ್ನು ದೂರ ಮಾಡಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರದಷ್ಟು ಪ್ರೀತಿಸಿದ ಪ್ರೇಮಿಗಳು ಈಗ ಮತ್ತೆ ಮನೆ ಬಿಟ್ಟು ಬಂದಿದ್ದು ತಮಗೆ ರಕ್ಷಣೆ ಬೇಕು ಎಂದು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇನ್ನು ಯುವತಿ ಪವಿತ್ರ ತಂದೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ತನಗೆ ಪದೆ ಪದೇ ಕಿರುಕುಳ ನೀಡುತ್ತಿದ್ದಾರೆ. ಜೀವ ಬೆದರಿಕೆ ಇದ್ದು, ನಮಗೆ ರಕ್ಷಣೆ ನೀಡಿ. ನನ್ನ ಸ್ವ ಇಚ್ಛೆಯಿಂದ ನಾನು ಬಂದಿದ್ದೇನೆ. ಕೊಟ್ರೇಶ್ ತಾಯಿ ಕೂಡ ಸದ್ಯಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಪವಿತ್ರ ಹೇಳಿದ್ದಾಳೆ. ಜೀವ ಬೆದರಿಕೆ ಇರುವ ನಮಗೆ ಪೊಲೀಸ್ ಇಲಾಖೆ ರಕ್ಷಣೆ ನೀಡಬೇಕು ಎಂಬುದು ಪ್ರೇಮಿಗಳ ಮನವಿಯಾಗಿದೆ.

Last Updated : Jan 3, 2020, 5:24 PM IST

For All Latest Updates

ABOUT THE AUTHOR

...view details