ಕರ್ನಾಟಕ

karnataka

ETV Bharat / state

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕ ಬಲಿ? - ದಾವಣಗೆರೆ

ದಾವಣಗೆರೆಯಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿರುವ ಆರೋಪ ಕೇಳಿಬಂದಿದೆ.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿರುವ ಆರೋಪ

By

Published : Sep 27, 2019, 8:20 PM IST

ದಾವಣಗೆರೆ:ಮನೆ ಮುಂದೆ ಆಟವಾಡುತಿದ್ದ ಬಾಲಕ ವಿದ್ಯುತ್ ಟ್ರಾನ್ಸ್​ಫಾರ್ಮರ್​ ಮುಟ್ಟಿದ ಪರಿಣಾಮ ಸಾವಿಗೀಡಾಗಿದ್ದಾನೆ.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿರುವ ಆರೋಪ

ಬಾಷಾ ನಗರದ 8 ವರ್ಷದ ಬಾಲಕ ಶಾಹೀದ್ ಮೃತ ದುರ್ದೈವಿ. ತಾಯಿ ಅಫ್ರಾಜ್ ಬಾನು ಮನೆ ಒಳಗಡೆ ನಮಾಜ್ ಮಾಡುತ್ತಿದ್ದರು. ಈ ವೇಳೆ ಮನೆಯ ಮುಂದೆ ಆಟ ಆಡುತ್ತಿದ್ದ ಬಾಲಕ ಟ್ರಾನ್ಸ್​ಫಾರ್ಮರ್ ಹತ್ತಿರ ಹೋಗಿದ್ದಾನೆ. ಈ ವೇಳೆ ಅಲ್ಲಿದ್ದ ಟಿಸಿ ಬಾಕ್ಸ್ ಮುಟ್ಟಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಲಕ ಬಲಿ..?
ಬಾಷಾ ನಗರದ ಐದನೇ ತಿರುವಿನಲ್ಲಿ ಅಳವಡಿಸಲಾಗಿರುವ ಟ್ರಾನ್ಸ್ಫಾರ್ಮರ್ ಬಳಿ ವಿದ್ಯುತ್ ಕಂಬಗಳಲ್ಲಿನ ವೈರ್​ಗಳು ಕೈಗೆಟುಕುವಹಾಗಿವೆ. ಅಲ್ಲದೆ ಟ್ರಾನ್ಸ್​​ಫಾರ್ಮರ್ ಬಳಿಯ ಬಾಕ್ಸ್​ಗಳನ್ನೂ ತೆರೆದಿಡಲಾಗಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯಾರಾದರೂ ಸತ್ತಾಗ ಇಲ್ಲಿಗೆ ಬಂದು ಸರಿಪಡಿಸುವ ಭರವಸೆ ಕೊಡುತ್ತಾರೆ. ಬಳಿಕ ಇದೇ ಗೋಳು ಎನ್ನುವುದು ಸ್ಥಳೀಯರ ಆರೋಪ.

ABOUT THE AUTHOR

...view details