ಕರ್ನಾಟಕ

karnataka

ಸಾಧನೆ ಮಾಡಿದ್ರೂ ಸಿಗಲಿಲ್ಲ ಸರ್ಕಾರಿ ಕೆಲಸ... ಈಗ ಕಸದ ವಾಹನ ಓಡಿಸ್ತಿದ್ದಾರೆ ರಾಷ್ಟ್ರಮಟ್ಟದ ಕ್ರೀಡಾಪಟು!

By

Published : Dec 25, 2020, 10:13 PM IST

Updated : Dec 25, 2020, 10:22 PM IST

ದಾವಣಗೆರೆಯ ಶೇಖರಪ್ಪ ನಗರದ ನಿವಾಸಿ ಪವರ್ ಲಿಫ್ಟರ್ ಕ್ರೀಡಾಪಟು ಮಂಜಪ್ಪ ಹಲವು ವರ್ಷಗಳಿಂದ ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಅಭ್ಯಾಸ ಮಾಡುತ್ತಾ ರಾಜ್ಯ, ರಾಷ್ಟ್ರಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಆದರೆ ಇವರ ಹಿಂದೆ ಬಂದವರಿಗೆ ಸರ್ಕಾರ ಗುರುತಿಸಿ ಸರ್ಕಾರಿ ಕೆಲಸವನ್ನು ನೀಡಿದ್ದು, ಇವರನ್ನು ಮಾತ್ರ ಮರೆತು ಬಿಟ್ಟಿದೆ.

ರಾಷ್ಟ್ರಮಟ್ಟದ ಕ್ರೀಡಾಪಟು
ರಾಷ್ಟ್ರಮಟ್ಟದ ಕ್ರೀಡಾಪಟು

ದಾವಣಗೆರೆ:ದೇಶದ ವಿವಿಧ ರಾಜ್ಯಗಳಲ್ಲಿನ ಪವರ್ ಲಿಫ್ಟಿಂಗ್ ಟೂರ್ನಮೆಂಟ್​ನಲ್ಲಿ ಭಾಗವಹಸಿ ಹಲವು ಪದಕಗಳನ್ನು ಪಡೆದು ಬಲಿಷ್ಠ ವ್ಯಕ್ತಿ ಎಂದು ಖ್ಯಾತಿ ಪಡೆದಿರುವ ಪವರ್ ಲಿಫ್ಟರ್​ವೊಬ್ಬರು ಇದೀಗ ದಾವಣಗೆರೆ ಮಹಾನಗರ ಪಾಲಿಕೆಯ ಕಸದ ವಾಹನ ಓಡಿಸಿ ಜೀವನ ಸಾಗಿಸುತ್ತಿದ್ದಾರೆ.

ಹೌದು, ದಾವಣಗೆರೆಯ ಶೇಖರಪ್ಪ ನಗರದ ನಿವಾಸಿ ಪವರ್ ಲಿಫ್ಟರ್ ಮಂಜಪ್ಪ ಹಲವು ವರ್ಷಗಳಿಂದ ಪವರ್ ಲಿಫ್ಟಿಂಗ್ ಕ್ರೀಡೆಯಲ್ಲಿ ಅಭ್ಯಾಸ ಮಾಡುತ್ತಾ ರಾಜ್ಯ, ರಾಷ್ಟ್ರ‌ಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಆದರೆ ಇವರ ಹಿಂದೆ ಬಂದವರಿಗೆ ಸರ್ಕಾರ ಗುರುತಿಸಿ ಸರ್ಕಾರಿ ಕೆಲಸವನ್ನು ನೀಡಿದೆಯಾದರೂ ಇವರನ್ನು ಮಾತ್ರ ಮರೆತು ಬಿಟ್ಟಿದೆ. ಸದ್ಯ ತುಂಬಾ ಕಷ್ಟದಲ್ಲಿರುವ ಮಂಜಪ್ಪ ಗುತ್ತಿಗೆ ಆಧಾರದ ಮೇಲೆ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಾಗಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.

ಸಾಧನೆ ಮಾಡಿದ್ರೂ ಸಿಗಲಿಲ್ಲ ಸರ್ಕಾರಿ ಕೆಲಸ

ಸ್ಟ್ರಾಂಗ್ ಮ್ಯಾನ್ ಆಗಿ ವಿವಿಧ ಪ್ರಶಸ್ತಿ ಮುಡಿಗೇರಿಸಿಕೊಂಡ ಮಂಜಪ್ಪ
ಕೇರಳ, ದೆಹಲಿ, ಮಧ್ಯಪ್ರದೇಶ, ಪಾಂಡಿಚೇರಿ, ಉತ್ತರ ಪ್ರದೇಶ ಸೇರಿದಂತೆ ನಾನಾ ರಾಜ್ಯಗಳಲ್ಲಿ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗಿಯಾಗಿ ಸ್ಟ್ರಾಂಗ್‌ ಮ್ಯಾನ್ (ಬಲಿಷ್ಠ ವ್ಯಕ್ತಿ) ಎಂಬ ಪದಕಗಳನ್ನು ಹಾಗೂ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ‌. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಐತಿಹಾಸಿಕ ಹಂಪಿ ಉತ್ಸವದಲ್ಲು ಕೂಡ ಮಂಜಪ್ಪ ಭಾಗವಹಿಸಿ ಬಲಿಷ್ಠ ವ್ಯಕ್ತಿ ಎಂಬ ಪ್ರಶಸ್ತಿಯನ್ನು ಗೆದ್ದು ಬೀಗಿದ್ದಾಗಿದೆ. ಇತ್ತೀಚೆಗೆ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದೆ. ಸೀನಿಯರ್ ನ್ಯಾಷನಲ್ ಕ್ಲಾಸಿಕ್, ಏಷಿಯನ್ ಕ್ಲಾಸಿಕ್, ಪವರ್ ಲಿಫ್ಟರ್ ಆಫ್ ಇಂಡಿಯಾ ಇನ್ನಿತರ ಪ್ರಶಸ್ತಿಗಳು ಇವರಿಗೆ ದೊರಕಿವೆ‌‌.

ಪೌರಕಾರ್ಮಿಕರಾಗಿ ಕಾಯಕ
ಹಲವು ವರ್ಷಗಳಿಂದ ಪವರ್ ಲಿಫ್ಟ್ ‌ಕ್ರೀಡೆಯಲ್ಲಿ ಸಕ್ರಿಯರಾಗಿರುವ ಮಂಜಪ್ಪಗೆ ಸರ್ಕಾರ ಗುರುತಿಸಿ ಸರ್ಕಾರಿ ಕೆಲಸ ನೀಡಬೇಕಾಗಿತ್ತು.‌ ಆದರೆ ಅವರ ಹಿಂದೆ ಬಂದವರಿಗೆ ಸರ್ಕಾರಿ ಕೆಲಸ ನೀಡಿ ಸರ್ಕಾರ‌ ತಾರತಮ್ಯ ಮಾಡಿದೆ. ಇದರಿಂದ ಜೀವನ ನಡೆಸುವುದು ಕಷ್ಟ ಎಂದು ಅರಿತ ಮಂಜಪ್ಪ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಕಸದ ಗಾಡಿಯ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ತಮ್ಮ ಮಡದಿಯೊಂದಿಗೆ ಕಷ್ಟಕರ ಜೀವನ ನಡೆಸುತ್ತಿದ್ದಾರೆ.

ಬ್ಲಡ್‌ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ಮಂಜಪ್ಪನ ಮಡದಿ
ಮಂಜಪ್ಪನವರ ಮಡದಿಗೆ ಬ್ಲಡ್ ಕ್ಯಾನ್ಸರ್ ಇರುವುದು ವೈದ್ಯರು ಖಚಿತ ಪಡಿಸಿದ್ದು, ಅದರ ಚಿಕಿತ್ಸೆಗಾಗಿ ಮಂಜಪ್ಪ ಪರಿತಪಿಸುತ್ತಿದ್ದಾರೆ. ಹೊರ ಗುತ್ತಿಗೆ ಆಧಾರದ ಮೇಲೆ ಪೌರಕಾರ್ಮಿಕನಾಗಿ ಕೆಲಸ‌ ಮಾಡುತ್ತಿದ್ದರೂ ಜೀವನ ಕಷ್ಟಕರವಾಗಿದೆ.

Last Updated : Dec 25, 2020, 10:22 PM IST

ABOUT THE AUTHOR

...view details