ದಾವಣಗೆರೆ:ಭಾರತೀಯ ಜನತಾ ಪಕ್ಷದ ಮುಖಂಡ ಲೋಕಿಕೆರೆ ನಾಗರಾಜ್ ಎಂಬುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದೆ. ಆದರೆ ಅವರು ನ್ಯಾಯಾಲಯಕ್ಕೆ ಶರಣಾಗುತ್ತೇನೆ ಎಂದು ಹೇಳಿ ಆಸ್ಪತ್ರೆ ಸೇರಿದ್ದಾರೆ. ನ್ಯಾಯಾಂಗದ ಕುರಿತು ಸರಿಯಾದ ತಿಳುವಳಿಕೆಯಿಲ್ಲದೇ ಜೈಲು ಸೂಪರಿಂಟೆಂಡೆಂಟ್ ನ್ಯಾಯಾಂಗ ನಿಂದನೆ ಮಾಡಿದ್ದು, ಎಲ್ಲಾ ರೀತಿಯ ವಾಮಮಾರ್ಗವನ್ನು ಮಾಡಿದ್ದಾರೆ. ಹೀಗಾಗಿ ಜೈಲು ಸೂಪರಿಂಟೆಂಡೆಂಟ್ ಅವರನ್ನು ಅಮಾನತುಗೊಳಿಸಬೇಕು ಎಂದು ಮೇಲಧಿಕಾರಿಗಳಿಗೆ ಮನವಿ ಮಾಡುತ್ತೇನೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ರಾಮಪ್ಪ ತಿಳಿಸಿದ್ದಾರೆ.
ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ವಿರುದ್ಧ ವೈ.ರಾಮಪ್ಪ ನ್ಯಾಯಾಂಗ ನಿಂದನೆ ಆರೋಪ - ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ ರಾಮಪ್ಪ
ಲೋಕಸಭೆ ಚುನಾವಣೆ ವೇಳೆ ನನ್ನ ವಿರುದ್ದ ಹಲವರು ಪ್ರತಿಭಟನೆ ನಡೆಸಿ ಅವಮಾನಗೊಳಿಸಿದ್ದರು. ಹೀಗಾಗಿ ಅಂದು ಹಲವರ ಮೇಲೆ ದೂರು ದಾಖಲಿಸಿದ್ದೆ, ಅದರಲ್ಲಿ ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಕೂಡ ಇದ್ದರು. ಮೊನ್ನೆ ನಡೆದ ಪಾಲಿಕೆ ಚುನಾವಣೆಯಲ್ಲಿ ನಮ್ಮ ಮನೆಯ ಮುಂಭಾಗದ ಚುನಾವಣಾ ಬೂತ್‌ನಲ್ಲಿ ಕೂತು ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ರಾಮಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ವೈ. ರಾಮಪ್ಪ, ಅವನು ಭಾರತೀಯ ಜನತಾ ಪಕ್ಷದ ಮುಖಂಡ ಎಂದು ಹೇಳುತ್ತಾನೆ, ಆದ್ರೆ ನಾನು ಕಾಂಗ್ರೆಸ್ ಪಕ್ಷದ ಒಬ್ಬ ಮುಖಂಡ,ಜಿಲ್ಲಾ ಪಂಚಾಯ್ತಿಯ ಒಬ್ಬ ಮಾಜಿ ಅಧ್ಯಕ್ಷನಾಗಿದ್ದೇನೆ, ನನಗೆ ಬೇರೆ ಯಾವುದೇ ಕೆಲಸ ಇಲ್ವಾ?ಎಂದರು. ಅಲ್ಲದೇ ಅದೇ ದಿನ ದೇವಸ್ಥಾನಕ್ಕೆ ಹೋದಾಗ ಮೊಬೈಲ್ ಕರೆ ಮಾಡಿ ಅಸಾಂವಿಧಾನಿಕ ಪದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ಇದಾದ ಬಳಿಕ ಅಂದು ಸಂಜೆ ನನಗೆ ಕರೆ ಮಾಡಿ ನನ್ನ ಮೇಲೆ ಯಾಕೆ ಪೊಲೀಸ್ ಕೇಸ್ ಕೊಟ್ಟಿದ್ದೀಯಾ? ಎಂದು ನಿಂದಿಸುವುದರ ಮೂಲಕ ಮತ್ತೆ ಕೃತ್ಯ ಮುಂದುವರೆಸಿದರು. ಈ ಹಿನ್ನಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಬಳಿಕ ಮೊನ್ನೆ ನ್ಯಾಯಾಲಯಕ್ಕೆ ಶರಣಾಗುತ್ತೇನೆ ಎಂದು ಹೋದಂತೆ ನಾಟಕವಾಡಿ ಬಳಿಕ ಆಸ್ಪತ್ರೆ ಸೇರಿದ್ದಾರೆ, ಸುಮ್ಮನೆ ಆಸ್ಪತ್ರೆ ಸೇರುವುದು ಏನಿದೆ? ಈ ಹಿನ್ನಲೆ ಜೈಲು ಅಧಿಕಾರಿಗಳ ಲೋಪ ಇರಬಹುದು ಎಂದು ತಿಳಿದಿದ್ದು, ಜೈಲಾಧಿಕಾರಿಗಳ ವಿರುದ್ಧ ಮೇಲಧಿಕಾರಿಗಳ ದೂರು ನೀಡಲಿದ್ದೇನೆ ಎಂದು ತಿಳಿಸಿದರು.