ದಾವಣಗೆರೆ: ಕಲ್ಲು ನಾಗರ ಕಂಡರೆ ಹಾಲನೆರೆವರಯ್ಯ, ದಿಟ ನಾಗರ ಕಂಡರೆ ಕಲ್ಲು ಹೊಡೆಯುವರಯ್ಯ ಎಂಬ ಶರಣರ ವಚನದಂತೆ ಬಹುತೇಕ ಕಡೆ ಕಲ್ಲು ನಾಗರಕ್ಕೆ ಮಾತ್ರ ನಾಗರ ಪಂಚಮಿಯಲ್ಲಿ ಹಾಲನ್ನು ಎರೆಯಲಾಗುತ್ತೆ. ಆದ್ರೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಜೀವಂತ ನಾಗರಹಾವಿಗೆ ಜನರು ಹಾಲುಣಿಸುವ ಮೂಲಕ ನಾಗರ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಜೀವಂತ ಹಾವಿಗೆ ಹಾಲುಣಿಸಿ ನಾಗರ ಪಂಚಮಿ ಆಚರಿಸಿದ ಗ್ರಾಮಸ್ಥರು
ಉಚ್ಚಂಗಿದುರ್ಗದಲ್ಲಿ ಜೀವಂತ ನಾಗರಹಾವಿಗೆ ಹಾಲುಣಿಸುವ ಮೂಲಕ ನಾಗರ ಪಂಚಮಿಯನ್ನು ಜನರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
snake
ನಾಗರ ಹಾವಿನ ಮರಿ ಆಲೂರು ನಾರಪ್ಪ ಎಂಬುವರ ಮನೆಯಲ್ಲಿ ಪ್ರತ್ಯಕ್ಷವಾಗಿತ್ತು. ನಾರಪ್ಪ ಅವರು ಹಾವನ್ನು ಬುಟ್ಟಿಯಲ್ಲಿ ಇಟ್ಟಿದ್ದರು. ಗ್ರಾಮಸ್ಥರು ಹಾವನ್ನು ಬಕೆಟ್ಗೆ ಹಾಕಿ ಹಾಲನ್ನು ಎರೆದಿದ್ದಾರೆ. ಹಾಲನ್ನು ಎರೆಯುವಾಗ ಹಾವು ಎಡೆ ಎತ್ತಿತ್ತು.
ತಮ್ಮ ಊರಿಗೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಲ್ಲಿ ನಿಜ ನಾಗರಕ್ಕೆ ಜನರು ಹಾಲುಣಿಸಿದ್ದಾರೆ. ಇದಕ್ಕೂ ಮೊದಲು ಉಚ್ಚಂಗಿದುರ್ಗದ ಗುಡ್ಡದ ಮೇಲಿನ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನಾಗರ ಹಾವಿಗೆ ಹಾಲು ಎರೆದು ಪಂಚಮಿ ಹಬ್ಬ ಆಚರಿಸಿದ್ದಾರೆ.