ದಾವಣಗೆರೆ: ಹರಪನಹಳ್ಳಿ ತಾಲೂಕಿನಲ್ಲಿ ಅದ್ದೂರಿಯಾಗಿ ನಡೆಯುವ ಮೈಲಾರ ಲಿಂಗೇಶ್ವರನ ಮೊದಲ ಕಾರ್ಣಿಕೋತ್ಸವ ಎಂದೇ ಕರೆಯಲ್ಪಡುವ 'ದೊಡ್ಡ ಮೈಲಾರದ ಕಾರ್ಣಿಕ' ಪಟ್ಟಣದ ಹೊರ ವಲಯದಲ್ಲಿ ನಿನ್ನೆ ಸಂಜೆ ನಡೆಯಿತು.
'ಅಂಬ್ಲಿ ರಾಶಿ ತುಂಬಿ ತುಳುಕಿತಲೇ ಪರಾಕ್'... ಮೈಲಾರ ಲಿಂಗೇಶ್ವರನ ಮೊದಲ ಕಾರ್ಣಿಕ - ಹರಪನಹಳ್ಳಿ
ನಿನ್ನೆ ಸಂಜೆ ಮೈಲಾರ ಲಿಂಗೇಶ್ವರನ ಮೊದಲ ಕಾರ್ಣಿಕೋತ್ಸವ ಹರಪನಹಳ್ಳಿ ತಾಲೂಕಿನಲ್ಲಿ ಅದ್ದೂರಿಯಾಗಿ ನಡೆಯಿತು.
ಮೈಲಾರ ಲಿಂಗೇಶ್ವರನ ಮೊದಲ ಕಾರ್ಣಿಕ ಆಚರಣೆ
ಸಂಜೆ ಸರಿಯಾಗಿ 6.30ಕ್ಕೆ ಗೊರವಪ್ಪ ಕೋಟೆಪ್ಪ ಅವರು ಬಿಲ್ಲನ್ನು ಏರಿ ಸದ್ದಲೇ ಎಂದಾಗ ನೆರೆದ ಸಹಸ್ರಾರು ಭಕ್ತರು ಮೌನಕ್ಕೆ ಶರಣಾದರು. ಆಗ 'ಅಂಬ್ಲಿ ರಾಶಿ ತುಂಬಿ ತುಳುಕಿತಲೇ ಪರಾಕ್' ಎಂದು ಕಾರ್ಣಿಕ ನುಡಿದು ಹಿಮ್ಮುಖವಾಗಿ ಬಿದ್ದಾಗ ಉಳಿದ ಗೊರವಪ್ಪರು ಆತನನ್ನು ಎತ್ತಿ ಹಿಡಿದರು.
ಸತತ ಬರಗಾಲದಿಂದ ಬಸವಳಿದಿದ್ದ ರೈತರಿಗೆ ಭವಿಷ್ಯದ ಸಂದೇಶ ಹರ್ಷದ ಹೊನಲು ತಂದಿದೆ. ಸಮೃದ್ಧ ಮಳೆ ಸುರಿದು ಉತ್ತಮ ಫಸಲು ಬರಲಿದೆ. ರೈತನ ಬಾಳು ಹಸನಾಗಲಿದೆ ಎಂಬುದು ಅಂಬ್ಲಿ ರಾಶಿ ತುಂಬಿ ತುಳುಕಿತಲೇ ಪರಾಕ್ ಕಾರ್ಣಿಕದ ಸಾರಾಂಶ ಎಂಬುದು ಹಿರಿಯರು ಅಭಿಪ್ರಾಯವಾಗಿದೆ.