ಕರ್ನಾಟಕ

karnataka

ETV Bharat / state

ಕೋಳಿವಾಡ ಮನೆ ಮೇಲೆ ನಡೆದದ್ದು ಐಟಿ ದಾಳಿ ಅಲ್ಲ, ಅದರಲ್ಲಿ ನನ್ನ ಪಾತ್ರವಿಲ್ಲ: ಬೊಮ್ಮಾಯಿ ಸ್ಪಷ್ಟನೆ - ಉಪಚುನಾವಣೆ 2019

ಕೆ.ಬಿ ಕೋಳಿವಾಡ ಅವರ ಮನೆ ದಾಳಿ ನಡೆದಿರುವುದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ ಎಂದು ಗೃಹ ಸಚಿವ ಬಸವರಾಜ್​ ಬೊಮ್ಮಾಯಿ ಸ್ಪಷ್ಟನೆ ನೀಡಿದ್ದಾರೆ.

Bommayi
ಬಸವರಾಜ್​ ಬೊಮ್ಮಾಯಿ ಹೇಳಿಕೆ

By

Published : Dec 4, 2019, 12:10 PM IST

ದಾವಣಗೆರೆ: ರಾಣೆಬೆನ್ನೂರು ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಕೋಳಿವಾಡರ ಮನೆ ಮೇಲೆ ನಡೆದದ್ದು ಐಟಿ ದಾಳಿ ಅಲ್ಲ, ಇದರಲ್ಲಿ ನನ್ನ ಪಾತ್ರವೇನು ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬಸವರಾಜ್​ ಬೊಮ್ಮಾಯಿ ಹೇಳಿಕೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಅಧಿಕಾರಿಗಳ ಜೊತೆ ಚುನಾವಣಾಧಿಕಾರಿಗಳು ನಡೆಸಿದ ದಾಳಿ ಇದು. ಇದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ನಾಳೆ ಚುನಾವಣೆ ನಡೆಯಲಿದ್ದು, 15ಕ್ಕೆ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ. ಜನರಲ್ಲಿ ಬಿಜೆಪಿ ಬಗ್ಗೆಯೇ ಹೆಚ್ಚಿನ ಒಲವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details